ಈ ಫೋಟೋದಲ್ಲಿರೋ ಬಾಲಕಿ ಇಂದು ಬಾಲಿವುಡ್​​ ಬ್ಯೂಟಿ: ಅರೆ ಬೆತ್ತಲೆ ಫೋಟೋಗಳಿಂದಲೇ ಫೇಮಸ್​!

Urfi
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಫೋಟೋವೊಂದು ಹರಿದಾಡುತ್ತಿದೆ. ಅದರ ಜತೆಯಲ್ಲೇ ಆ ಫೋಟೋದಲ್ಲಿರುವ ಬಾಲಕಿ ಯಾರೆಂದು ಗುರುತಿಸುವಿರಾ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಉತ್ತರಿಸಲು ಕೆಲವರು ಗೊಂದಲಕ್ಕೀಡಾಗಿದ್ದರೆ, ಇನ್ನು ಕೆಲವರು ಆ ಬಾಲಕಿ ಯಾರೆಂಬುದನ್ನು ಸಹ ಪತ್ತೆಹಚ್ಚಿದ್ದಾರೆ.

ಆಕೆ ಯಾರು ಅಂತಾ ನಿಮಗೆ ಗೊತ್ತಿಲ್ಲ ಅಂದ್ರೆ ನಾವು ಹೇಳ್ತೀವಿ ಕೇಳಿ. ಫೋಟೋದಲ್ಲಿರುವ ಬಾಲಕಿ ಬೇರೆ ಯಾರು ಅಲ್ಲ. ಅವಳೇ ಉರ್ಫಿ ಜಾವೇದ್​. ಈ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರ ಮೈ ನವಿರೇಳುತ್ತದೆ. ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್‌ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್‌ ಕೂಡ ಒಬ್ಬಳು. ಇದಾಗಲೇ ಈಕೆ ತೊಟ್ಟಿರುವ ಡ್ರೆಸ್‌ಗಳಿಂದ ಟ್ರೋಲ್‌ ಆಗುತ್ತಿದ್ದಾಳೆ. ಆದರೆ ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಈಕೆಯದ್ದು ಎತ್ತಿದ ಕೈ.

ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಉರ್ಫಿ ಜಾವೇದ್ ಭಾರಿ ಪ್ರಸಿದ್ಧಿ ಪಡೆದಿದ್ದಾಳೆ. ತುಂಡುಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದೇ ಈಕೆಯ ಕೆಲಸ. ಹಣ ಗಳಿಕೆಯ ವಿಷಯದಲ್ಲಿಯೂ ಈಕೆ ಹಿಂದಿ ಬಿದ್ದಿಲ್ಲ. ಏಕೆಂದರೆ, ಈಕೆ ಸುಮಾರು 170 ಕೋಟಿ ರೂಪಾಯಿಗಳ ಒಡತಿ.

ವರದಿಯ ಪ್ರಕಾರ, 26 ವರ್ಷದ ಉರ್ಫಿ ಸುಮಾರು 170 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾಳೆ. ಇದರ ಜತೆಗೆ ಮುಂಬೈನಲ್ಲಿ ಐಷಾರಾಮಿ ಬಂಗಲೆ ಹಾಗೂ ಸಕಲ ಸೌಲಭ್ಯ ಇರುವ ಫ್ಲ್ಯಾಟ್​ ಇದೆ ಎನ್ನಲಾಗುತ್ತಿದೆ. ತನ್ನ ಈ ಕನಿಷ್ಠ ಬಟ್ಟೆಯ ಪೋಸ್​ ನೀಡುವುದರಿಂದಲೇ ತಿಂಗಳಿಗೆ ಸುಮಾರು 2-5 ದಶಲಕ್ಷ ರೂಪಾಯಿ ಗಳಿಸುತ್ತಾರೆ ಎನ್ನಲಾಗಿದೆ. ಈ ಮೂಲಕ ಮಾಡೆಲಿಂಗ್​ ಪ್ರಪಂಚದಲ್ಲಿ ಈಕೆ ಮಿಂಚುತ್ತಿದ್ದಾಳೆ.

ಅಂದಹಾಗೆ ಉರ್ಫಿ ಜಾವೇದ್ ಉತ್ತರ ಪ್ರದೇಶದ ರಾಜಧಾನಿ ಲಖನೌದವರು. 1996ರ ಅಕ್ಟೋಬರ್​ 15ರಂದು ಹುಟ್ಟಿರುವ ಈ ಬೆಡಗಿಯ ವಯಸ್ಸು ಇದೀಗ 26 ವರ್ಷ. ಸದ್ಯ ಉರ್ಫಿ ಅವರ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡಿದವರು ನಿಜಕ್ಕೂ ನಂಬಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಸಾಕಷ್ಟು ಕಾಮೆಂಟ್​​ಗಳು ಹರಿದುಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net