

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಲ್ ಜನ್ಮದಿನ ಇಂದು. ಈ ದಿನವನ್ನು ಮುಂದಿನ ದಿನಗಳಲ್ಲಿ ‘ನಿರ್ದೇಶಕರ ದಿನ’ ಎಂದು ಆಚರಿಸಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.
ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಆರ್. ನಂಜುಂಡೇಗೌಡ ಮತ್ತು ಇತರೆ ಪದಾಧಿಕಾರಿಗಳನ್ನು ಕರೆದು ಇದೇ ಸಂದರ್ಭದಲ್ಲಿ ಸನ್ಮಾಸಿಲಾಯಿತು. 'ನಾವು ಮಾಡಬೇಕಾದ ಕೆಲಸ ತುಂಬಾ ಇದೆ ಎಂಬ ಜವಾಬ್ದಾರಿಯನ್ನು ಈ ಸನ್ಮಾನ ನೀಡಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರಿಗೆ ಗೌರವ ತಂದು ಕೊಡುವ ಕೆಲಸವನ್ನು ನಮ್ಮ ಸಂಘ ಮಾಡಲಿದೆ. ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋದಾಗಿ ನಂಜುಂಡೇಗೌಡ' ಇದೇ ಸಂದರ್ಭದಲ್ಲಿ ಹೇಳಿದರು.