

‘Pushpa 2: The Rule’ ಚಿತ್ರ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಹೊರ ಹೊಮ್ಮಿದೆ. ಡಿಸೆಂಬರ್ 05 ರಂದು ಬಿಡುಗಡೆಯಾದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೇವಲ ಮೂರು ದಿನದಲ್ಲಿ 621 ಕೋಟಿ ರೂಪಾಯಿ ಬಾಚಿಕೊಂಡಿದೆ.
ಇದೀಗ ಸಿನಿ ರಸಿಕರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಟಿಕೆಟ್ ದರದಲ್ಲಿ ಇಳಿಕೆಯಾಗಿದೆ. ಪ್ರೀಮಿಯರ್ ಶೋಗೆ ಮಾತ್ರ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಶೀಘ್ರದಲ್ಲೇ ಕಮ್ಮಿ ಬೆಲೆಗೆ ಟಿಕೆಟ್ ದರ ಲಭ್ಯವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಎರಡು ತೆಲುಗು ರಾಜ್ಯ ಸರ್ಕಾರಗಳು ಪುಷ್ಪ 2 ಟಿಕೆಟ್ ದರ ಹೆಚ್ಚಿಸಲು ಒಪ್ಪಿಕೊಂಡಿದ್ದವು. ಇದರಿಂದ ಡಿಸೆಂಬರ್ 4ರ ವಿಶೇಷ ಪ್ರೀಮಿಯರ್ ಶೋಗೆ ಹೆಚ್ಚುವರಿಯಾಗಿ 800 ರೂಪಾಯಿ ನಿಗದಿಯಾಗಿತ್ತು.
ಭಾನುವಾರ ಮಲ್ಟಿಪ್ಲೆಕ್ಸ್ನಲ್ಲಿ ‘ಪುಷ್ಪ 2’ ನೋಡಲು 500 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ನಲ್ಲಿ 300 ರೂಪಾಯಿಗಿಂತ ಹೆಚ್ಚಿತ್ತು. ಆದರೆ ಈ ವಾರ ಟಿಕೆಟ್ ದರ ಇಳಿಕೆಯಾಗಲಿದೆ. ಡಿಸೆಂಬರ್ 09 ರಿಂದ 16 ರವರೆಗೆ ಸಿಂಗಲ್ ಸ್ಕ್ರೀನ್ ನಲ್ಲಿ ರೂ.105 ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ರೂ.150 ಹೆಚ್ಚಳ ಮಾಡಲು ಆಂಧ್ರ, ತೆಲಂಗಾಣ ಸರ್ಕಾರಗಳು ಅನುಮತಿ ನೀಡಿವೆ.
ಸಿನಿಮಾ ರಿಲೀಸ್ ಆದಾಗ ಬೆಂಗಳೂರಿನ ಐನಾಕ್ಸ್ ಮಾಲ್ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 1200 ರೂ.ಇರಿಸಲಾಗಿತ್ತು. ಇದೀಗ ಡಿ.10ರಿಂದ ದರ ಇಳಿಕೆಯಾಗಿದೆ. ಬೆಂಗಳೂರಲ್ಲಿ ಬಾಲ್ಕನಿಗೆ 200 ರೂಪಾಯಿಂದ ಇದ್ದರೆ, ಮಿಡಲ್ ಕ್ಲಾಸ್ ಟಿಕೆಟ್ 150 ರೂಪಾಯಿಂದ ಟಿಕೆಟ್ ಸಿಗ್ತಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ 210 ರೂಪಾಯಿಯಿಂದ ಟಿಕೆಟ್ ಲಭ್ಯವಿದೆ.