

ಎಪ್ಪತ್ತರ ದಶಕದಲ್ಲಿ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ‘ಅಮರ್ ಪ್ರೇಮ್ ಚಿತ್ರದ ಫೇಮಸ್ ಡೈಲಾಗ್ ‘ಪುಷ್ಪಾ.. ಐ ಹೇಟ್ ಟಿಯರ್ಸ್’ ಈಗ ಸಿನಿಮಾವೊಂದರ ಟೈಟಲ್ ಆಗಿದೆ.
ಇದು ರೊಮ್ಯಾಂಟಿಕ್ ಮತ್ತು ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಇರುವ ಚಿತ್ರವಾಗಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಫೆ. 28ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ನಾಯಕರಾಗಿ ಕನ್ನಡದ ಜೆಕೆ(ಕಾರ್ತಿಕ್ ಜಯರಾಂ) ನಟಿಸಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಜತೆ ಮಾತನಾಡಿದ ಜೆಕೆ, ‘ಹಿಂದಿ ಸೀರಿಯಲ್ ‘ರಾವಣ್’ನಲ್ಲಿ ನಟಿಸುವಾಗ ಈ ಆಫರ್ ಸಿಕ್ಕಿತು. ಈ ಚಿತ್ರದಲ್ಲಿ ಪತಿ- ಪತ್ನಿ ಮತ್ತು ವಿವಾಹೇತರ ಸಂಬಂಧದ ಕುರಿತ ಕಥೆ ಇದೆ.
ಕಪಿಲ್ ಶರ್ಮಾ ಶೋ ಖ್ಯಾತಿಯ ಕೃಷ್ಣಾ ಅಭಿಷೇಕ್, ಅನುಸ್ಮೃತಿ ಮುಖ್ಯಪಾತ್ರದಲ್ಲಿದ್ದಾರೆ. ಒಂದು ರೀತಿ ಅವರದ್ದು ಕಾಮಿಡಿ ವಿಲನ್ ರೋಲ್ ಪಾತ್ರ‘ ಎಂದು ತಿಳಿಸಿದರು. ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಭಾರತೀಯ ಸಂಸ್ಕೃತಿಯೇ ಶ್ರೇಷ್ಠವೆಂದು ತೋರಿಸಲಾಗಿದೆ ಎಂದರು ನಿರ್ದೇಶಕ ದಿನಕರ್ ಕಪೂರ್. ರಾಮ್ ಗುಲಾಟಿ ಸಂಗೀತ ನೀಡಿದ್ದು, ಅರವಿಂದ ಸಿಂಹ ಛಾಯಾಗ್ರಹಣ ಮಾಡಿದ್ದಾರೆ.