

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮಗಳಾಗಿ ‘ದೃಶ್ಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಆರೋಹಿ ನಾರಾಯಣ, ಸದ್ಯ ಎರಡು ಸಿನಿಮಾಗಳಲ್ಲಿ ಬಿಜಿ. ಆರೋಹಿಗೆ ಹುಟ್ಟುಹಬ್ಬದ ದಿನ (ಜ.26) ಗಿಫ್ಟ್ ಆಗಿ ಮತ್ತೊಂದು ಸಿನಿಮಾದ ಅವಕಾಶ ಸಿಕ್ಕಿದೆ. ಹೌದು, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಆರೋಹಿಗೆ ತಮ್ಮ ಮುಂದಿನ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದು, ಈ ಬಗ್ಗೆ
ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನಿರೀಕ್ಷಿತವಾಗಿ ಸಿಕ್ಕ ಈ ಅವಕಾಶದಿಂದ ಆರೋಹಿ ಸಂತಸಗೊಂಡಿದ್ದಾರೆ. ‘ಇದೇ ವರ್ಷ ನನ್ನ ನಿರ್ವಣದ ರೊಮ್ಯಾಂಟಿಕ್-ಕಾಮಿಡಿ ಸಿನಿಮಾದಲ್ಲಿ ನೀವು ಅಭಿನಯಿಸಲಿದ್ದೀರಿ’ ಎಂದು ತಿಳಿಸುವ ಮೂಲಕ ಆರೋಹಿಗೆ ನಿರ್ವಪಕ ಪುಷ್ಕರ್ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ‘ನನ್ನ ಹುಟ್ಟುಹಬ್ಬಕ್ಕೆ ಪುಷ್ಕರ್ ಅವರು ನೀಡಿದ ಬಹುದೊಡ್ಡ ಗಿಫ್ಟ್ ಇದು.
ಈ ಅವಕಾಶ ತುಂಬ ಖುಷಿ ತಂದಿದೆ. ಚಿತ್ರದಲ್ಲಿ ನಾಯಕಿ ಪಾತ್ರ ನನ್ನದು. ಸದ್ಯ ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಮೇ ಅಥವಾ ಜೂನ್ಗೆ ಶೂಟಿಂಗ್ ಆರಂಭ ಆಗಲಿದೆ’ ಎನುತ್ತಾರೆ ಆರೋಹಿ. ಇದು ಅವರಿಗೆ ಪುಷ್ಕರ್ ನೀಡಿರುವ ಎರಡನೇ ಅವಕಾಶ. ಸದ್ಯ ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ನಿರ್ವಣದ ‘ಭೀಮಸೇನ ನಳಮಹಾರಾಜ’ ಚಿತ್ರದಲ್ಲಿ ಆರೋಹಿ ಅಭಿನಯಿಸುತ್ತಿದ್ದಾರೆ. ಇದು ಅವರು ನಾಯಕಿ ಆಗಿ ಕಾಣಿಸಿಕೊಂಡಿರುವ ಮೊದಲ ಚಿತ್ರ. ಅಲ್ಲದೆ, ನಟ ರಮೇಶ್ ಅರವಿಂದ ಅಭಿನಯದ ಸಸ್ಪೆನ್ಸ್-ಥ್ರಿಲ್ಲರ್ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲೂ ಆರೋಹಿ ಕಾಣಿಸಿಕೊಂಡಿದ್ದು, ಫೆ. 21ಕ್ಕೆ ತೆರೆ ಕಾಣಲಿದೆ.