ಇಂದು ಸಂಜೆ ಲೈವ್​ ಬರ್ತಿದ್ದಾರೆ ಪುನೀತ್​ ರಾಜಕುಮಾರ್​

Puneeth - Final
Puneeth
Published on

ಲಾಕ್​ಡೌನ್​ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಲವು ಸ್ಟಾರ್​ ನಟರು ಲೈವ್​ ಬಂದು ತಮ್ಮ ಅಭಿಮಾನಿಗಳ ಜತೆಗೆ ಮಾತನಾಡಿದ್ದಾರೆ. ನಟರಾದ ಶಿವರಾಜಕುಮಾರ್​, ಉಪೇಂದ್ರ, ಸುದೀಪ್​, ಪುನೀತ್​ ಸೇರಿದಂತೆ ಹಲವು ಸ್ಟಾರ್​ಗಳು ತಮ್ಮ ಅಭಿಮಾನಿಗಳ ಜತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಇಂದು ಪುನೀತ್ ಮತ್ತೊಮ್ಮೆ ಇನ್​ಸ್ಟಾಗ್ರಾಂನಲ್ಲಿ ಸಂಜೆ ಆರು ಗಂಟೆಗೆ ಲೈವ್​ ಬಂದು, ತಮ್ಮ ಮನಸ್ಸಿನ ಮಾತುಗಳನ್ನು ಆಡಲಿದ್ದಾರೆ. ಯಾವಾಗ ಪುನೀತ್​ ಅವರು ಲೈವ್​ ಬಂದು ಮಾತನಾಡುತ್ತಾರೆ ಎಂಬ ಸುದ್ದಿಯಾಯಿತು, ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಜತೆಗೆ ಮಾತನಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಕಳೆದ ನಾಲ್ಕು ತಿಂಗಳುಗಳಿಂದ ಪುನೀತ್​, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಚಿತ್ರೀಕರಣದಲ್ಲಿ ಭಾಗವಹಿಸಿಲ್ಲ. ಈ ಸಮಯವನ್ನು ಮನೆಯಲ್ಲೇ ಕಳೆದ ಅವರು, ಫಿಸಿಕಲ್​ ಫಿಟ್ನೆಸ್​ ಬಗ್ಗೆ ಹೆಚ್ಚಿನ ಗಮನವನ್ನು ಕೊಟ್ಟಿದ್ದಾರೆ. ಮನೆಯಲ್ಲಿದ್ದುಕೊಂಡೇ ಪ್ರತೀ ದಿನ, ದೇಹ ದಂಡಿಸಿದ್ದಾರೆ. ಪುನೀತ್​ ವರ್ಕೌಟ್​ ಮಾಡುತ್ತಿರುವ ವಿಡಿಯೋಗಳು, ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯವಾಗಿವೆ.

ಇನ್ನು ಲಾಕ್​ಡೌನ್​ಗೂ ಮುನ್ನ ಪುನೀತ್​, 'ಯುವರತ್ನ' ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದರು. ಚಿತ್ರಕ್ಕೆ ಇನ್ನೆರೆಡು ಹಾಡುಗಳು ಬಾಕಿ ಇದ್ದು, ಆ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ಹೋಗಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರೀಕರಣಕ್ಕೆ ಬ್ರೇಕ್​ ಬೀಳುವಂತಾಯಿತು. ಈಗ ಒಂದೊಂದೇ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪುನೀತ್​, ಸಹ ಮುಂದಿನ ದಿನಗಳಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಪುನೀತ್​ ಅವರ ಇಂದಿನ್​ ಎನ್​ಸ್ಟಾಗ್ರಾಂ ಲೈವ್​ನಲ್ಲಿ ಲಾಕ್​ಡೌನ್​, ವರ್ಕೌಟ್​, ಮುಂದಿನ ಚಿತ್ರಗಳು, ವೃತ್ತಿಬದುಕು ಮುಂತಾದ ಹಲವು ವಿಷಯಗಳ ಬಗ್ಗೆ ಅವರು ಮಾತನಾಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net