ಸೆಟ್ಟೇರಿತು ಉಗ್ರಾಯುಧಮ್​; ಪೀರಿಯಾಡಿಕ್​ ಡ್ರಾಮಾ ಜಾನರ್​ ಚಿತ್ರದಲ್ಲಿ ಶ್ರೀಮುರಳಿ

ascascas
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಕೆಜಿಎ್​ ಚಾಪ್ಟರ್​ 1', "ಎಕ್ಕ' ಚಿತ್ರಗಳ ಖ್ಯಾತಿಯ ನಟ ಪುನೀತ್​ ರುದ್ರನಾಗ್​ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳುತ್ತಿರುವ, ಶ್ರೀಮುರಳಿ ನಾಯಕನಾಗಿರುವ ಸಿನಿಮಾ "ಉಗ್ರಾಯುಧಮ್​'. ಇದೊಂದು ಪೀರಿಯಾಡಿಕ್​ ಡ್ರಾಮಾ ಜಾನರ್​ ಕಥೆಯಾಗಿದ್ದು, "ನಿದ್ರಾದೇವಿ ನೆಕ್ಸ್ಟ್​ಡೋರ್​' ಖ್ಯಾತಿಯ ಜಯರಾಮ್​ ದೇವಸಮುದ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ಪುನೀತ್​ ರುದ್ರನಾಗ್​, "ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಶ್ರೀಮುರಳಿ ಮತ್ತು ಕುಟುಂಬದವರು ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೀಗ ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಶ್ರೀಮುರಳಿ ಅವರೇ ನಾಯಕನಾಗಿರುವುದು ಖುಷಿ ನೀಡಿದೆ. "ಉಗ್ರಾಯುಧಮ್​' 700 ವರ್ಷಗಳ ಹಿಂದಿನ ಕಥೆ. ನವೆಂಬರ್​ನಲ್ಲಿ ಶೂಟಿಂಗ್​ ನಡೆಸಲಿದ್ದೇವೆ. ಸಕಲೇಶಪುರದ 135 ಎಕರೆ ಜಾಗದಲ್ಲಿ ಅದ್ಧೂರಿ ಸೆಟ್​ ಹಾಕಲಾಗುತ್ತಿದ್ದು, ಹೆಚ್ಚಿನ ಶೂಟಿಂಗ್​ ಅಲ್ಲಿಯೇ ನಡೆಯಲಿದೆ. ಈ ಸಿನಿಮಾಗೆ ಡಾ. ರಾಜಕುಮಾರ್​ ಅವರೇ ಸ್ಪೂರ್ತಿ' ಎಂದು ಹೇಳಿಕೊಂಡರು.

ನಾಯಕ ಶ್ರೀಮುರಳಿ, ""ಬಘೀರ' ಚಿತ್ರದ ಬಳಿಕ ಸುಮಾರು 200 ಕಥೆಗಳನ್ನು ಕೇಳಿದ್ದೇನೆ. ಅದರಲ್ಲಿ ನನಗೆ ಇಷ್ಟ ಆಗಿದ್ದು ಮೂರು ಕಥೆಗಳಷ್ಟೇ. ಆ ಪೈಕಿ ಕೆಲ ದಿನಗಳ ಹಿಂದಷ್ಟೇ "ಪರಾಕ್​' ಮುಹೂರ್ತವಾಗಿದ್ದು, ಇದೀಗ "ಉಗ್ರಾಯುಧಮ್​' ಮುಹೂರ್ತ ನೆರವೇರಿದೆ. "ಬಘೀರ' ಬಳಿಕ ಈ ಚಿತ್ರ ಮೊದಲು ತೆರೆಗೆ ಬರಲಿದೆ. ಪುನೀತ್​ ತುಂಬ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾ ಮಾಡಲಿದ್ದೇವೆ' ಎಂದರು.

ಸದ್ಯ ಚಿತ್ರದ ತಾರಾಗಣದ ಆಯ್ಕೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ನಾಯಕಿಯ ಕುರಿತು ಘೋಷಿಸುವುದಾಗಿ ಚಿತ್ರತಂಡ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net