ಜೇಮ್ಸ್​ನಲ್ಲಿ ಪವರ್‌ಸ್ಟಾರ್‌ಗೆ ಸೈನಿಕನ ಗೆಟಪ್- ಪೋಸ್ಟರ್‌ ಬಿಡುಗಡೆ

james
Published on

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್್ಸ’ ಚಿತ್ರವು, ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರತಂಡದಿಂದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದ್ದು, ಗನ್ ಹಿಡಿದು ಯುದ್ಧಕ್ಕೆ ಸಜ್ಜಾದ ಯೋಧನಾಗಿ ಪುನೀತ್ ಕಾಣಿಸಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಸ್ಥಳದಲ್ಲಿ ಚಿಣ್ಣರಿಂದ ಈ ಪೋಸ್ಟರ್ ಬಿಡುಗಡೆ ಮಾಡಿಸಲಾಗಿದೆ.

‘ಜೇಮ್್ಸ’ ಚಿತ್ರದಲ್ಲಿ ಪುನೀತ್ ಅವರ ಪಾತ್ರವೇನು ಎಂಬ ಬಗ್ಗೆ ನಿರ್ದೇಶಕ ಚೇತನ್ ಇದುವರೆಗೂ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಇದೀಗ ಸೈನಿಕನ ಲುಕ್ ಬಿಡುಗಡೆ ಆಗಿರುವುದನ್ನು ನೋಡಿದರೆ, ಚಿತ್ರದಲ್ಲಿಯೂ ಅದೇ ಗೆಟಪ್​ನಲ್ಲಿಯೇ ಇರುತ್ತಾರಾ ಅಥವಾ ಇಂಟ್ರೊಡಕ್ಷನ್ ಹಾಡಿನಲ್ಲಿ ಮಾತ್ರ ಹಾಗೆ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿದೆ.

ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜೇಮ್್ಸ’ ಚಿತ್ರ ಹಲವು ಕಾರಣಕ್ಕೆ ವಿಶೇಷ ಎನಿಸಿಕೊಂಡಿದೆ. ಪುನೀತ್ ಅವರ ಕೊನೆಯ ಸಿನಿಮಾ ಎಂಬ ಬೇಸರ ಒಂದು ಕಡೆಯಾದರೆ, ಈ ಚಿತ್ರದ ಮೂಲಕವೇ ಅಣ್ಣಾವ್ರ ಮೂವರು ಮಕ್ಕಳು ಮೊದಲ ಸಲ ಒಂದಾಗಿದ್ದಾರೆ. ಇತ್ತೀಚೆಗಷ್ಟೇ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಪುನೀತ್ ಹೊರತುಪಡಿಸಿ ಎಲ್ಲ ಕಲಾವಿದರ ಡಬ್ಬಿಂಗ್ ಸಹ ಮುಗಿದಿದೆ. ಕಿಶೋರ್ ಪತ್ತಿಕೊಂಡ ನಿರ್ವಿುಸಿರುವ ಈ ಚಿತ್ರದಲ್ಲಿ ಪುನೀತ್​ಗೆ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net