ದೇವರಾದ ಪುನೀತ್

Puneeth
Published on

ಬೆಂಗಳೂರು: ಪುನೀತ್ ರಾಜಕುಮಾರ್ ಮತ್ತು ‘ಮದರಂಗಿ’ ಕೃಷ್ಣ ಜತೆಯಾಗಿ ನಟಿಸುವುದು ಹೊಸ ವಿಷಯವಲ್ಲ. ಈ ಹಿಂದೆ, ಪುನೀತ್ ಅಭಿನಯದ ‘ಜಾಕಿ’ ಮತ್ತು ‘ಹುಡುಗರು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವುದರ ಜತೆಗೆ ಚಿಕ್ಕ ಪಾತ್ರಗಳಲ್ಲೂ ಕೃಷ್ಣ ಕಾಣಿಸಿಕೊಂಡಿದ್ದರು. ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಇಬ್ಬರೂ ಸಹೋದರರಾಗಿ ಅಭಿನಯಿಸಿದ್ದರು. ಇದೀಗ ಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ಪುನೀತ್ ಅತಿಥಿ ಪಾತ್ರ ಮಾಡುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಅವರು ದೇವರಾಗುತ್ತಿದ್ದಾರೆ.

ಕಳೆದ ವರ್ಷ ತಮಿಳಿನಲ್ಲಿ ಗಮನಸೆಳೆದ ಚಿತ್ರಗಳ ಪೈಕಿ ‘ಓ ಕಡುವುಳೇ’ ಸಹ ಒಂದು. ಈ ಚಿತ್ರವನ್ನು ಇದೀಗ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದಾರೆ ನಾಗೇಂದ್ರ ಪ್ರಸಾದ್. ಇವರು ಹಿಂದೊಮ್ಮೆ ಕನ್ನಡದಲ್ಲಿ ‘ಚಿತ್ರ’, ‘ಮನಸ್ಸೆಲ್ಲಾ ನೀನೇ’ ಮುಂತಾದ ಚಿತ್ರಗಳಲ್ಲಿ ಹೀರೋ ಆಗಿದ್ದರು. ಈಗ ಇವರ ನಿರ್ದೇಶನದ ಮೊದಲ ಚಿತ್ರಕ್ಕೆ ನಾಯಕನಾಗಿ ಕೃಷ್ಣ ಆಯ್ಕೆಯಾಗಿದ್ದು, ಮಿಕ್ಕಂತೆ ವಿಜಯ್ ಸೇತುಪತಿ ಮಾಡಿದ ದೇವರ ಪಾತ್ರವನ್ನು ಮಾಡುವುದಕ್ಕೆ ಪುನೀತ್ ಒಪ್ಪಿದ್ದಾರಂತೆ. ಚಿತ್ರದ ಕೆಲಸಗಳು ಶುರುವಾಗಿದ್ದು, ಏಪ್ರಿಲ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net