ಇಶಾನ್-ಆಶಿಕಾ ಆರ್​ಸಿಬಿಗೆ ಜೈ

Ashika
Published on

ಬೆಂಗಳೂರು: ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇತ್ತ ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ಮದೇ ಎನ್ನುತ್ತಿದ್ದಾರೆ. ಇದೀಗ ಆ ಸಂಭ್ರಮವನ್ನು ಹೆಚ್ಚಿಸಲು ‘ಆರ್​ಸಿಬಿಗೆ ಜೈ ...’ ಎಂಬ ಹಾಡೊಂದು ಕಿವಿಗಪ್ಪಳಿಸಲು ಸಿದ್ಧವಾಗಿದೆ.

ಪ್ರದೀಪ್ ದೊಡ್ಡಯ್ಯ ಎಂಬುವವರು ಆರ್​ಸಿಬಿ ತಂಡದ ಮೇಲಿನ ಅಭಿಮಾನಕ್ಕಾಗಿ ಪ್ರಮೋಷನಲ್ ಹಾಡೊಂದನ್ನು ಬರೆದು ಚಿತ್ರೀಕರಿಸಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಆ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಲಿದೆ.

ಈಗಾಗಲೇ ಹಲವು ಸಿನಿಮಾಗಲ್ಲಿ ನಟಿಸುವುದರ ಜತೆಗೆ, ಸ್ಕ್ರೀನ್ ಪ್ಲೇ ಬರಹಗಾರರಾಗಿ ಅನುಭವ ಇರುವ ಪ್ರದೀಪ್, ಇದೀಗ ಈ ಹಾಡನ್ನು ಸಿದ್ಧಪಡಿಸಿದ್ದು, ವಿಶೇಷ ಎಂಬಂತೆ ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಸಿನಿಮಾ ಜೋಡಿ ಆಶಿಕಾ ರಂಗನಾಥ್ ಮತ್ತು ಇಶಾನ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಸದ್ಯ ಹಾಡಿನ ಶೂಟಿಂಗ್ ಮುಗಿಸಿರುವ ಪ್ರದೀಪ್, ‘ಆರ್​ಸಿಬಿ ಅಭಿಮಾನಿಗಳಿಗೆ ಈ ಹಾಡು ಸಖತ್ ಇಷ್ಟವಾಗಲಿದೆ. ಜತೆಗೆ ಆರ್​ಸಿಬಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇರುವುದರಿಂದ ಕನ್ನಡದ ಜತೆಗೆ ಇಂಗ್ಲಿಷ್ ಪದಗಳನ್ನು ಬಳಸಿಕೊಂಡು ಸಾಹಿತ್ಯ ಬರೆಯಲಾಗಿದೆ. ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದು, ಒಟ್ಟು ಮೂರೂವರೆ ನಿಮಿಷದ ಹಾಡು ಇದಾಗಲಿದೆ’ ಎನ್ನುತ್ತಾರೆ. ಇದನ್ನೂ ಓದಿ: ಚೆನ್ನೈ ಯುವತಿ ಲಂಡನ್‌ನಲ್ಲಿ ಅಪಹರಣ- ಲವ್‌ ಜಿಹಾದ್‌ ಪ್ರಕರಣಕ್ಕೆ ಜಾಕೀರ್‌ ನಾಯ್ಕ್‌ ಲಿಂಕ್‌?

ಈ ಹಿಂದೆ ಕೊಲವೆರಿ ಡಿ ಹಾಡು ಸೂಪರ್ ಹಿಟ್ ಆಗಿತ್ತು. ಅದೇ ರೀತಿ ಆರ್​ಸಿಬಿ ಅಭಿಮಾನಿಗಳನ್ನೇ ಗಮನದಲ್ಲಿಟ್ಟುಕೊಂಡು ಹಾಡನ್ನು ಮಾಡಿದ್ದೇವೆ. ಹಾಡಿನ ಗುಣಮಟ್ಟ ನೋಡಿ ಸ್ಟಾರ್ ಸ್ಪೋರ್ಟ್ಸ್​ನವರಿಂದಲೂ ಆಫರ್ ಬಂದಿದೆ. ಒಟ್ಟಿನಲ್ಲಿ ಭಾಷೆ ಬರದವನನ್ನೂ ಕುಣಿಸಬೇಕು ಎಂಬುದು ನಮ್ಮ ಆಶಯ. | ಪ್ರದೀಪ್ ದೊಡ್ಡಯ್ಯ ನಿರ್ದೇಶಕ   https://www.vijayavani.net/fans-demand-cbi-probe-in-actor-uday-kirans-suicide/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net