ಜೀ ಕನ್ನಡ ಮನರಂಜನಾ ಚಾನೆಲ್ ಕೆಲ ಕಾರ್ಯಕ್ರಮಗಳ ಸಮಯ ಬದಲಾವಣೆ

z
Published on

ಬೆಂಗಳೂರು: ಕರೊನಾ ಕರ್ಫ್ಯೂ ಜಾರಿಯಾಗಿರುವುದರಿಂದ ಮೇ 4 ರವರೆಗೆ ಹಲವು ನಿರ್ಬಂಧಗಳನ್ನು ಜನಜೀವನದ ಮೇಲೆ ಸರ್ಕಾರ ಹಾಕಿದೆ. ಹೀಗಾಗಿ ಜನ ಅನಿವಾರ್ಯವಾಗಿ ಮನೆಯಲ್ಲೇ ಕಾಲ ಕಳೆಯಬೇಕಾಗಿದೆ.

ಹೀಗಾಗಿ ಜನಪ್ರಿಯ ಮನರಂಜನಾ ಚಾನೆಲ್ ಜೀ ಕನ್ನಡ ವಾಹಿನಿ ತನ್ನ ಕೆಲ ಕಾರ್ಯಕ್ರಮಗಳಲ್ಲಿ ಬದಲಾವಣೆ ಮಾಡಿದೆ.
ಅದರಂತೆ 'ಪರಮಾವತಾರಿ ಶ್ರೀ ಕೃಷ್ಣ' ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1 ಕ್ಕೆ ಪ್ರಸಾರವಾಗಲಿದೆ. 'ಮನೆ ಮನೆ ಮಹಾಲಕ್ಷ್ಮಿ' ರಿಯಾಲಿಟಿ ಶೋ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. 'ಮಹಾನಾಯಕ ಡಾ ಬಿ.ಆರ್ ಅಂಬೇಡ್ಕರ್' ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮಗಳು ಸೋಮವಾರದಿಂದ ಅಂದರೆ ಏಪ್ರಿಲ್ 26 ರಿಂದ ಬದಲಾದ ಸಮಯದಲ್ಲಿ ಪ್ರಸಾರ ಆಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net