ನಟಿ ಪ್ರಿಯಾಂಕಾ ಉಪೇಂದ್ರ ಈಗ ಡಿಟೆಕ್ಟಿವ್ ತೀಕ್ಷ್ಣ

Priyanka
Published on

ಬೆಂಗಳೂರು: ‘ಸೆಕೆಂಡ್ ಹಾಫ್’ ಎಂಬ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪೊಲೀಸ್ ಪೇದೆಯ ಪಾತ್ರ ಮಾಡಿದರು. ‘ಉಗ್ರಾವತಾರ’ದಲ್ಲಿ ಇನ್​ಸ್ಪೆಕ್ಟರ್ ಆಗಿ ಬಡ್ತಿ ಪಡೆದರು. ಇದೀಗ ಅವರು ಪತ್ತೆದಾರಿಯಾಗುವುದಕ್ಕೆ ಹೊರಟಿದ್ದಾರೆ. ಇನ್ನೂ ಹೆಸರಿಡದ ಹೊಸ ಚಿತ್ರವೊಂದರಲ್ಲಿ ಅವರು ಡಿಟೆಕ್ಟೀವ್ ತೀಕ್ಷ್ಣಳಾಗಿ ಅಭಿನಯಿಸುವುದಕ್ಕೆ ಸಜ್ಜಾಗಿದ್ದಾರೆ. ಇಲ್ಲಿ ನಾಯಕಿ ಎಲ್ಲರ ಮನಸ್ಸನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾಳಂತೆ. ಅಪರಾಧ ಚಟುವಟಿಕೆಗಳನ್ನು ಚಾಣಾಕ್ಷತನದಿಂದ ಕಂಡು ಹಿಡಿಯುತ್ತಾಳೆ ಎಂಬುದು ನಿರ್ದೇಶಕ ತ್ರಿವಿಕ್ರಮ ರಘು ಮಾತು.

ಹಲವು ನಿರ್ದೇಶಕರ ಜತೆಗೆ ಕೆಲಸ ಮಾಡಿರುವ ತ್ರಿವಿಕ್ರಮ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಉಪ್ಪಿನಂಗಡಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಮನು ದಾಸ್ಪಪ ಛಾಯಾಗ್ರಹಣ ಮಾಡುತ್ತಿದ್ದು, ಈ ಚಿತ್ರ ಕನ್ನಡವಲ್ಲದೆ, ತೆಲುಗಿನಲ್ಲೂ ಬಿಡುಗಡೆಯಾಗಲಿದೆಯಂತೆ. ಈ ಚಿತ್ರಕ್ಕೆ ಮಧುಕುಮಾರ್ ಎನ್. ಮತ್ತು ಪುರುಷೋತ್ತಮ್ ಬಂಡವಾಳ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net