1980ರ ಕಾಲಘಟ್ಟದಲ್ಲಿ ಪ್ರಿಯಾಂಕಾ

Priyanka
Published on

ಬೆಂಗಳೂರು: ಪ್ರಿಯಾಂಕಾ ಉಪೇಂದ್ರ, ‘1980’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಬಹುಶಃ ಚಿತ್ರ ನವೆಂಬರ್​ನಲ್ಲಿ ಪ್ರಾರಂಭವಾಗಲಿದೆ ಎಂಬ ಸುದ್ದಿಯನ್ನು ಕಳೆದ ವರ್ಷದ ಅಕ್ಟೋಬರ್​ನಲ್ಲಿ ಓದಿರಬಹುದು. ವಿಷಯ ಏನು ಗೊತ್ತಾ? ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ.

ಪ್ರಿಯಾಂಕಾ ಉಪೇಂದ್ರ ಅವರಿಗೆ ಲಾಕ್​ಡೌನ್ ನಂತರ ಸಿಕ್ಕ ಮೊದಲ ಚಿತ್ರ ಇದಂತೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಕಾರಣ, ಕಥೆ ಅದ್ಬುತವಾಗಿದೆ. ಆರಂಭದಲ್ಲಿ ಶೂಟಿಂಗ್ ಹೇಗಿರುತ್ತದೋ ಎಂಬ ಟೆನ್ಶನ್ ಇತ್ತು. ಯಾವ ಸಮಸ್ಯೆಯೂ ಇಲ್ಲದೆ ಸಲೀಸಾಗಿ ಶನಿವಾರಸಂತೆಯಲ್ಲಿ ಶೂಟಿಂಗ್ ಮುಗಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೇಕಿಂಗ್ ವಿಚಾರದಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬರವಣಿಗೆ ತುಂಬ ಮಹತ್ವದ್ದು. ಇಲ್ಲಿ ಬರವಣಿಗೆಯೂ ಚೆನ್ನಾಗಿದೆ’ ಎನ್ನುತ್ತಾರೆ. ‘1980’ ಚಿತ್ರವನ್ನು ರಾಜ್ಕಿರಣ್ ನಿರ್ದೇಶಿಸಿದ್ದಾರೆ.

ಶೀರ್ಷಿಕೆಗೆ ತಕ್ಕಂತೆ, 1980 ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಪ್ರಿಯಾಂಕಾ ಉಪೇಂದ್ರ ಜತೆಗೆ, ಶರಣ್ಯ ಶೆಟ್ಟಿ, ಶ್ರೀಧರ್, ಅರವಿಂದ್ ರಾವ್, ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್ ಚಿತ್ರದಲ್ಲಿದ್ದಾರೆ. ಆರ್​ಕೆ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಈ ಚಿತ್ರಕ್ಕೆ ಚಿಂತನ್ ವಿಕಾಸ್ ಅವರ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net