ಪ್ರಿಯಾಂಕಾ ಎದೆಗಾರಿಕೆ; ನೆಟ್ಟಿಗರಿಂದ ತೀವ್ರ ಟೀಕೆ

Priyanka 27 Jan 20
Published on

ಬೆಂಗಳೂರು: ನಟಿಯರನೇಕರು ಅದರಲ್ಲೂ ಬಾಲಿವುಡ್ ಬೆಡಗಿಯರು ಉಡುಪಿನ ಕಾರಣಕ್ಕೆ ಆಗಾಗ ಟ್ರೋಲ್​ಗೆ ಹಾಗೂ ಸಿನಿಪ್ರಿಯರ ಅಸಮಾಧಾನಕ್ಕೆ ಒಳಗಾಗುವುದು ಹೊಸದೇನಲ್ಲ. ಇದೀಗ ಅಂಥದ್ದೇ ಒಂದು ಅಸಮಾಧಾನಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಒಳಗಾಗಿದ್ದಾರೆ. ಕಾರಣ, ಅವರು ಧರಿಸಿದ್ದ ಉಡುಪು.

ಲಾಸ್ ಏಂಜಲೀಸ್​ನ ಸ್ಟೇಪಲ್ ಸೆಂಟರ್​ನಲ್ಲಿ ಹಮ್ಮಿಕೊಂಡಿರುವ 62ನೇ ಗ್ರಾಮಿ ಅವಾರ್ಡ್ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಎದೆ ಕಾಣುವಂತೆ ನಿಲುವಂಗಿಯಂಥ ದಿರಿಸನ್ನು ತೊಟ್ಟು ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ, ಆ ಉಡುಗೆ ತೊಟ್ಟು ವಿವಿಧ ಭಂಗಿಯಲ್ಲಿ ಫೋಟೋಗೆ ಪೋಸ್ ಕೊಟ್ಟು ಸಂಭ್ರಮಿಸಿದ್ದಲ್ಲದೆ ಆ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.

ಈ ದಿರಿಸಿನಲ್ಲಿ ಅವರೊಂದಿಗೆ ಪತಿ ನಿಕ್ ಜೋನಾಸ್ ಕೂಡ ಇದ್ದಿದ್ದು ವಿಶೇಷ. ಪ್ರಿಯಾಂಕಾ ಹೀಗೆ ಬೋಲ್ಡ್ ಡ್ರೆಸ್​ನಲ್ಲಿ ಕಾಣಿಸಿಕೊಳ್ಳುವ ಎದೆಗಾರಿಕೆ ತೋರಿದ್ದಕ್ಕೆ ಕೆಲವರಷ್ಟೇ ಮೆಚ್ಚುಗೆ ಸೂಚಿಸಿದ್ದರೂ ಹಲವರು ತೀವ್ರವಾಗಿ ಟೀಕೆ ಮಾಡಿದ್ದಾರೆ. ಒಬ್ಬ ನಟಿಯಾಗಿ ಅದರಲ್ಲೂ ಇನ್ನೊಬ್ಬರಿಗೆ ಮಾದರಿಯಾಗಿ ಇರಬೇಕಾದವರು ಈ ರೀತಿ ಉಡುಪು ಧರಿಸುವುದು ಸಮಂಜಸವಲ್ಲ ಎಂಬುದಾಗಿ ನೆಟ್ಟಿಗರಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net