

ಬೆಂಗಳೂರು: ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ‘ಸಲಾರ್’ ಚಿತ್ರ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಶ್ರುತಿ ಹಾಸನ್ ಅವರನ್ನು ನಾಯಕಿಯನ್ನಾಗಿ ಘೋಷಿಸಿದ್ದ ಚಿತ್ರತಂಡ, ಸದ್ದಿಲ್ಲದೆ ಚಿತ್ರೀಕರಣವನ್ನೂ ಆರಂಭಿಸಿತ್ತು. ಇದೀಗ ಇದೇ ಬಳಗಕ್ಕೆ ಪ್ರಸ್ತುತ ಹಾಲಿವುಡ್ನಲ್ಲಿಯೇ ಬಿಜಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆದಿದೆಯಂತೆ!
ಹಾಗಾದರೆ, ‘ಸಲಾರ್’ ಚಿತ್ರದಲ್ಲಿ ಪ್ರಿಯಾಂಕಾಗೇನು ಕೆಲಸ? ಹೈ-ಆ್ಯಕ್ಷನ್ ‘ಸಲಾರ್’ನಲ್ಲಿ ವಿಶೇಷ ಹಾಡೊಂದನ್ನು ಸೃಷ್ಟಿಸಲು ತಂಡ ಪ್ಲಾನ್ ಮಾಡಿದೆ. ಆ ಹಾಡಿಗೆ ಪ್ರಿಯಾಂಕಾ ಅವರನ್ನು ಕರೆತರುವ ಬಗ್ಗೆ ಚರ್ಚೆಯಾಗಿದೆ. ಒಂದು ಹಂತದ ಮಾತುಕತೆ ನಡೆದಿದೆ ಎಂಬ ಮಾತುಗಳು ಟಾಲಿವುಡ್ ಅಂಗಳದಿಂದ ಕೇಳಿಬಂದಿದ್ದು, ಇನ್ನೇನು ಅವರಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ, ಚಿತ್ರಕ್ಕೆ ಮತ್ತಷ್ಟು ಮೈಲೇಜ್ ದಕ್ಕಲಿದೆ.