10ಕ್ಕೂ ಅಧಿಕ ಚಾರಿಟಿಗಳಿಗೆ ಪ್ರಿಯಾಂಕಾ ಚೋಪ್ರಾ ನೀಡಿದ ದೇಣಿಗೆ ಮೊತ್ತವೆಷ್ಟು?

priyanka_chopra_and_nick_jonas
Published on

ಸದ್ಯ ಅಮೆರಿಕದಲ್ಲಿ ಪತಿ ನಿಕ್ ಜೋನಸ್ ಜತೆಗೆ ಬೀಡು ಬಿಟ್ಟಿರುವ ಪ್ರಿಯಾಂಕಾ ಚೋಪ್ರಾ, ಕರೊನಾ ಕರಾಳತೆಗೆ ಮರುಕ ವ್ಯಕ್ತಪಡಿಸಿದ್ದಾರೆ. ಅಲ್ಲಿದ್ದುಕೊಂಡೆ, ಭಾರತ ಸೇರಿ ವಿಶ್ವದ ಹಲವು ಚಾರಿಟೇಬಲ್ ಟ್ರಸ್ಟ್‌ಗಳಿಗೆ ದೇಣಿಗೆ ನೀಡಿದ್ದಾರೆ. ಈವರೆಗೂ ಭಾರತೀಯ ಸಿನಿಮಾ ತಾರೆಯರು, ಪಿಎಂ ಕೇರ್ಸ್‌ ಮತ್ತು ಸಿನಿಮಾ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ದೇಣಿಗೆ ನೀಡಿದ್ದರು. ಇದೀಗ ಅದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರಿಯಾಂಕಾ, ವಿಶ್ವದ ಹಲವು ಚಾರಿಟೇಬಲ್ ಟ್ರಸ್ಟ್‌ಗಳಿಗೆ ನೆರವಾಗಿದ್ದಾರೆ.
ಕರೊನಾದಿಂದ ಇಡೀ ವಿಶ್ವವೇ ನರಳುತ್ತಿದೆ. ಆಹಾರ ಮತ್ತು ಚಿಕಿತ್ಸೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಎಲ್ಲೆಡೆ ಎದುರಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ಯೂನಿಸೆಫ್​, ಫೀಡಿಂಗ್ ಅಮೆರಿಕ, ಗೂಂಜ್, ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್, ನೊ ಕಿಡ್ ಹಂಗ್ರಿ, ಗಿವ್ ಇಂಡಿಯಾ, ಪಿಎಂ ಕೇರ್ಸ್, ಆರ್ಟ್ ಆಫ್​ ಲೀವಿಂಗ್ ಸೇರಿ ಇನ್ನೂ ಹಲವು ಚಾರಿಟಿಗಳಿಗೆ ಕೈ ಜೋಡಿಸಿದ್ದಾರೆ. ಇಡೀ ಜಗತ್ತು ಈಗ ಸಹಾಯದ ನಿರೀಕ್ಷೆಯಲ್ಲಿದೆ. ಇಂಥ ಸಂದರ್ಭದಲ್ಲಿ ಚಾರಿಟಿಗಳೆಲ್ಲವೂ ದೊಡ್ಡ ಮಟ್ಟದ ಕಾರ್ಯ ನಿರ್ವಹಿಸುತ್ತಿವೆ. ಆಹಾರದ ವ್ಯವಸ್ಥೆ ಜತೆಗೆ ವೈದ್ಯರ ಸ್ಥಿತಿಗತಿ, ಮನೆ ಇಲ್ಲದ ಸಮುದಾಯಗಳು ಮತ್ತು ಸಿನಿಮಾ ಕಾರ್ಮಿಕರಿಗೂ ನೆರವಾಗುತ್ತಿವೆ. ಹಾಗಾಗಿ ಈ ಎಲ್ಲ ಚಾರಿಟಿಗಳಿಗೆ ನಾನು ಮತ್ತು ನಿಕ್ ದೇಣಿಗೆ ನೀಡಿದ್ದೇವೆ. ಎಲ್ಲರೂ ಜತೆಯಾಗಿ ಕರೊನಾ ಮಾರಿಯನ್ನು ಹೊಡೆದೊಡಿಸೋಣ’ ಎಂದಿದ್ದಾರೆ.
ಸದ್ಯ ಬಾಲಿವುಡ್‌ನಲ್ಲಿಯೂ ದೇಣಿಗೆ ಸಂಗ್ರಹ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಆಲಿಯಾ ಭಟ್, ಕತ್ರಿನಾ ಕೈಫ್​ ಸೇರಿ ಹಲವು ಸಿನಿಮಾ ತಾರೆಯರು ತಾವೆಷ್ಟು ಕೊಟ್ಟಿದ್ದೇವೆ ಎಂಬುದನ್ನು ಗುಟ್ಟಾಗಿಟ್ಟಿದ್ದು, ಕೈಲಾದಷ್ಟು ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಉರಿ; ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಖ್ಯಾತಿಯ ವಿಕ್ಕಿ ಕೌಶಲ್, ಪಿಎಂ ಕೇರ್ಸ್‌ಗೆ 1 ಕೋಟಿ ರೂ. ನೀಡಿದ್ದಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ 21 ಲಕ್ಷ, ವರುಣ್ ಧವನ್ 30 ಲಕ್ಷ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net