ಸ್ಟಾರ್ ಸಂಭ್ರಮ 2020: ಫ್ರೆಂಡ್ ಮನೆಯಲ್ಲಿ ಸಿಂಪಲ್ ಪಾರ್ಟಿ

PRIYANKA U
Published on

ಹೊಸ ವರ್ಷ ಎಂದಾಕ್ಷಣ ಅಲ್ಲೊಂದು ಸಂಭ್ರಮ ಸಹಜ. ಇರುಳುರುಳಿ ಹಗಲಾಗಿ ಹೊಸ ಹರುಷ ಅರಳುವ ಆ ಕ್ಷಣಗಳನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಅಂಥ ಕ್ಷಣಗಳನ್ನು ತಾರೆಯರು ಹೇಗೆ ಕಳೆಯುತ್ತಾರೆ ಎಂಬ ಕುತೂಹಲಕ್ಕೆ ಅವರೇ ಇಲ್ಲಿ ಉತ್ತರಿಸಿದ್ದಾರೆ. ಮಾತ್ರವಲ್ಲ ಅವರ ಪಾಲಿಗೆ 2019 ಹೇಗಿತ್ತು, 2020ರ ಬಗ್ಗೆ ಇರುವ ನಿರೀಕ್ಷೆಗಳೇನು ಎಂಬ ಕುರಿತಾದ ಮಾಹಿತಿಯನ್ನು ಕೂಡ ಅವರ ಮಾತುಗಳಲ್ಲೇ ವಿಜಯವಾಣಿ ಇಲ್ಲಿ ನಿಮ್ಮ ಮುಂದಿಟ್ಟಿದೆ. 

ಮಕ್ಕಳಿಬ್ಬರಿಗೂ ಪರೀಕ್ಷೆ ಇರುವುದರಿಂದ ಈ ಸಲ ಸಿಂಪಲ್ ಆಗಿ ಫ್ರೆಂಡ್ ಮನೆಯಲ್ಲಿ ನ್ಯೂ ಈಯರ್ ಪಾರ್ಟಿ ಮಾಡುತ್ತಿದ್ದೇವೆ. ಇನ್ನು ಈ ವರ್ಷ ಚೆನ್ನಾಗಿಯೇ ಇತ್ತು. ದೇವಕಿ ಸಿನಿಮಾ ಮೂಲಕ ಪುತ್ರಿ ಐಶ್ವರ್ಯಾ ಕೂಡ ತೆರೆ ಮೇಲೆ ಕಾಣಿಸಿಕೊಂಡಳು. ನಾವು ಯಾವುದಕ್ಕೂ ಜಾಸ್ತಿ ನಿರೀಕ್ಷೆ ಇಟ್ಟು ಕೊಳ್ಳಬಾರದು. ದೇವರು ಕೊಟ್ಟಿದ್ದರ ಬಗ್ಗೆ ಮೆಚ್ಚುಗೆ ಇರಬೇಕು. ಹಾಗೆ ನೋಡಿದರೆ ಪ್ರತಿ ದಿನ ಕೂಡ ಕೊಡುಗೆಯೇ. ಈ ವರ್ಷ ತುಂಬ ಟ್ರಾವೆಲ್ ಮಾಡಿದ್ವಿ. ಮಕ್ಕಳ ಜತೆ ಬಹಳ ಸಮಯ ಕಳೆದ್ವಿ.

ಐಶ್ವರ್ಯಾ- ಆಯುಷ್ ಇಬ್ಬರಿಗೂ ಬೋರ್ಡ್ ಎಕ್ಸಾಮ್ ಇರುವುದರಿಂದ ಹೊಸ ವರ್ಷದ ಮೊದಲ ಮೂರು ತಿಂಗಳು ಅವರ ಬಗ್ಗೆಯೇ ಹೆಚ್ಚು ಗಮನ ಕೊಡುತ್ತಿದ್ದೇವೆ. ಉಳಿದಂತೆ ಮಮ್ಮಿ-2 ಬಗ್ಗೆ ಮಾತುಕತೆ ನಡೆಯುತ್ತಿದೆ. ಉಪೇಂದ್ರ ಕೂಡ ಹಲವಾರು ದೊಡ್ಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ನಾನು ಕೂಡ ಉಪ್ಪಿ ನಿರ್ದೇಶನಕ್ಕೆ ಕಾಯುತ್ತಿದ್ದು, ಹೊಸ ವರ್ಷದಲ್ಲಾದರೂ ಅವರು ಅದನ್ನು ಅನೌನ್ಸ್ ಮಾಡುತ್ತಾರೇನೋ ಎಂಬ ನಿರೀಕ್ಷೆಯಲ್ಲಿದ್ದೇನೆ.

| ಪ್ರಿಯಾಂಕಾ ಉಪೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net