ಪೊಲೀಸ್ ಪ್ರೇಮ್; ರೌಡಿ ಫೆಲೋದಲ್ಲಿ ಅತಿಥಿ ಪಾತ್ರ

Prem
Published on

ಬೆಂಗಳೂರು: ‘ನೆನಪಿರಲಿ’ ಪ್ರೇಮ್ ಅಭಿನಯದ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ನ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ, ಪ್ರೇಮ್ ಸದ್ದಿಲ್ಲದೆ ಆರ್​ಜೆ ರೋಹಿತ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ರೌಡಿ ಫೆಲೋ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಒಂದು ದಿನದ ಅವಧಿಯಲ್ಲಿ ತಮ್ಮ ಕೆಲಸ ಮುಗಿಸಿದ್ದಾರೆ. ಇದನ್ನೂ ಓದಿ: ಡ್ಯಾನ್ಸರ್ ಕಿಶೋರ್ ಜತೆ ಸಂಪರ್ಕ; ಇಬ್ಬರು ಯುವತಿಯರು ಸಿಸಿಬಿ ವಶಕ್ಕೆ

ಅಂದಹಾಗೆ, ‘ರೌಡಿ ಫೆಲೋ’ ಚಿತ್ರದ ಶೇ. 75ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು, 12 ದಿನಗಳ ಚಿತ್ರೀಕರಣ ಮುಗಿದರೆ ಕುಂಬಳಕಾಯಿ ಒಡೆಯಬಹುದು ಎನ್ನುತ್ತಾರೆ ರೋಹಿತ್. ಇದುವರೆಗೂ ‘ಕರ್ವ’, ‘ಬಕಾಸುರ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರೋಹಿತ್, ಈ ಚಿತ್ರವನ್ನು ನಿರ್ದೇಶಿಸಿದ್ದೇ ಒಂದು ಸ್ವಾರಸ್ಯಕರ ಸಂಗತಿ. ‘ನಾಲ್ಕು ಕಥೆಗಳನ್ನು ಕೇಳಿದ್ದೆ. ಈ ಪೈಕಿ ಈ ಕಥೆ ನನಗೆ ಚೆನ್ನಾಗಿರುತ್ತದೆ ಎಂದು ಪ್ರಶಾಂತ್ ನೀಲ್ ಹೇಳಿದ್ದರು. ಈ ಕಥೆಯನ್ನು ತಿದ್ದಿ ಒಂದು ರೂಪ ಕೊಟ್ಟರು. ಈ ಚಿತ್ರವನ್ನು ಯಾರಿಂದ ಮಾಡಿಸಬೇಕು ಎಂದು ಚರ್ಚೆಯಾದಾಗ, ನಾನು ಮಾಡುತ್ತೇನೆ ಎಂದೆ. ಪ್ರಶಾಂತ್ ಹಿಂದೆ ನಿಂತು ಮಾರ್ಗದರ್ಶನ ಮಾಡಿದರು’ ಎನ್ನುತ್ತಾರೆ ರೋಹಿತ್. ರೋಹಿತ್​ಗೆ ನಾಯಕಿಯಾಗಿ ವಿದ್ಯಾ ಪ್ರದೀಪ್ ನಟಿಸುತ್ತಿದ್ದು, ಮಿಕ್ಕಂತೆ ಊರ್ವಶಿ, ಅರವಿಂದ್ ಬೋಳಾರ್ ಮುಂತಾದವರು ನಟಿಸುತ್ತಿದ್ದಾರೆ. ರವಿವರ್ಮ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ವಿಲನ್ ಪಾತ್ರ ಮಾಡಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net