ಸ್ಟಾರ್ ಸುವರ್ಣದಲ್ಲಿ ಪ್ರೇಮೋತ್ಸವ

Premotsava
Published on

ಬೆಂಗಳೂರು: ಪ್ರೇಮಿಗಳ ದಿನದ ಅಂಗವಾಗಿ ಇಂದು ಸ್ಟಾರ್ ಸುವರ್ಣ ವಾಹಿನಿ ಯಲ್ಲಿ ಕಲರ್​ಫುಲ್ ಕಾರ್ಯಕ್ರಮವೊಂದು ನಡೆಯಲಿದೆ. ಅದೇ ‘ಪ್ರೇಮೋತ್ಸವ’. ಚಂದನವನದ ಮತ್ತು ಕನ್ನಡ ಕಿರುತೆರೆಯ ಹಲವು ನಟ-ನಟಿಯರು ಈ ಕಾರ್ಯಮಕ್ಕೆ ಮೆರಗು ತುಂಬಿದ್ದಾರೆ.

‘ಸಿಂಪಲ್ ಚೆಲುವೆ’ ಶ್ವೇತಾ ಶ್ರೀವಾತ್ಸವ್ ತಾಯಿಯಾದ ಬಳಿಕ ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ. ಪ್ರೇಮಿಗಳ ದಿನದ ಪ್ರಯುಕ್ತ ಅವರ ಪತಿ ಅಮಿತ್ ಸಹ ಶ್ವೇತಾ ಜತೆಯಾಗಿದ್ದಾರೆ. ಅನುಪಮಾ ಗೌಡ ಮತ್ತು ಕಿಶನ್, ನೇಹಾ ಗೌಡ ಮತ್ತು ಶೈನ್ ಶೆಟ್ಟಿ ಜೋಡಿಯಾಗಿ ಹೆಜ್ಜೆ ಹಾಕಿದರೆ, ಅದಿತಿ ಪ್ರಭುದೇವ ಸಿಂಗಲ್ ಆಗಿ ಬಂದು ತಮ್ಮ ನೃತ್ಯದ ಮೂಲಕ ಪ್ರೇಮಿಗಳ ದಿನಾಚರಣೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಇವರದೊಂದಿಗೆ ಸುವರ್ಣ ವಾಹಿನಿಯ ‘ಸರಸು’ ‘ಮನಸೆಲ್ಲಾ ನೀನೇ’ ಮತ್ತು ‘ರುಕ್ಕು’ ಧಾರಾವಾಹಿಯ ಜೋಡಿಗಳು ಭಾನುವಾರದ ಸಂಜೆಯ ಈ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ತುಂಬಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net