

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಲವ್ 360' ಖ್ಯಾತಿಯ ಡಾ. ಪ್ರವೀಣ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ "ದೇಸಾಯಿ'. ಚಿತ್ರವನ್ನು ನಾಗಿರೆಡ್ಡಿ ಭಡ ನಿರ್ದೇಶಿಸುತ್ತಿದ್ದು, ಮಹಾಂತೇಶ್ ಚೊಳಚಗುಡ್ಡ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರವಿಣ್ಗೆ ರಾಧ್ಯಾ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೆ ನಿರ್ಮಾಪಕ ಮಹಾಂತೇಶ್ ಮತ್ತು ನಾಯಕ ಪ್ರವಿಣ್, ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದರು.
ಮೊಬೈಲ್ನಲ್ಲಿಯೇ "ದೇಸಾಯಿ' ಚಿತ್ರದ ಟೀಸರ್ ಮತ್ತು ಹಾಡನ್ನು ವೀಸಿದ ಶ್ರೀಗಳು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಗದ್ದುಗೆಯ ದರ್ಶನ ಪಡೆದ ಚಿತ್ರತಂಡ ಮಠದಲ್ಲಿ ಪ್ರಸಾದ ಸೇವಿಸಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಬಸವರಾಜ್ ಬುಡ್ಡನಗೌಡರ, ಶರಣಪ್ಪ ನಾವೋಜಿ, ಅಶೋಕ್ ಲಾಗಲೋಟಿ, ನಿಂಗಣ್ಣ ಗೋಡಿ, ಸಂಗನಗೌಡ ಪಾಟೀಲ್ ಜತೆಗಿದ್ದರು.
ಪ್ರವೀಣ್, ರಾಧ್ಯ ಜತೆ "ಒರಟ' ಪ್ರಶಾಂತ್, ಚೆಲುವರಾಜ್, ಹರಿಣಿ ಪ್ರಶಾಂತ್ ನಟನ ಪ್ರಮುಖ ತಾರಾಗಣದಲ್ಲಿದ್ದಾರೆ. "ದೇಸಾಯಿ' ಚಿತ್ರಕ್ಕೆ ಪಿಕೆಎಚ್ ದಾಸ್ ಛಾಯಾಗ್ರಹಣ, ಸಾಯಿ ಕಾರ್ತಿಕ್ ಸಂಗೀತ, ದೀಪು ಎಸ್. ಕುಮಾರ್ ಸಂಕಲನವಿರಲಿದೆ.