

"ಸಲಾರ್'ಗೂ ಮುನ್ನ ಪ್ರಭಾಸ್ ಅಭಿನಯದಲ್ಲಿ ಪ್ರಶಾಂತ್ ನೀಲ್ ಇನ್ನೊಂದು ಚಿತ್ರ ನಿರ್ದೇಶಿಸಬೇಕಿದ್ದ ವಿಷಯ ಗೊತ್ತಾ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. "ಸಲಾರ್'ಗೂ ಮುನ್ನ ಪ್ರಭಾಸ್ಗೆ ಪ್ರಶಾಂತ್ ಒಂದು ಕಥೆ ಹೇಳಿದ್ದರಂತೆ. ಆದರೆ, ಸತತವಾಗಿ ದೊಡ್ಡ ಚಿತ್ರಗಳಲ್ಲೇ ನಟಿಸಿ ಸುಸ್ತಾಗಿದ್ದ ಪ್ರಭಾಸ್, ಆ ಚಿತ್ರವನ್ನು ಮುಂದಕ್ಕೆ ಹಾಕಿ, ಅದರ ಬದಲು ಇನ್ನೊಂದು ಸಣ್ಣ ಚಿತ್ರವನ್ನು ಮಾಡಿಕೊಡಲು ಕೇಳಿದರಂತೆ. ಆಗ ಶುರುವಾಗಿದ್ದೇ "ಸಲಾರ್'. ಹಾಗಾದರೆ, ಪ್ರಶಾಂತ್ ಮೊದಲು ಹೇಳಿದ ಕಥೆ ಚಿತ್ರವಾಗುವುದಿಲ್ಲವಾ ಎಂಬ ಪ್ರಶ್ನೆ ಬರಬಹುದು. ಅದು ಪ್ರಭಾಸ್ ಅಭಿನಯದ 25ನೇ ಚಿತ್ರವಾಗಲಿದೆ ಎಂಬ ಸುದ್ದಿಯೊಂದು ಇದೀಗ ಬಂದಿದೆ.
ಹೌದು, ಪ್ರಭಾಸ್ ಅಭಿನಯದ 23ನೇ ಚಿತ್ರ ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆ. ಆ ನಂತರ ಇನ್ನೊಂದು ಚಿತ್ರ ಮುಗಿಸಿ, ಪ್ರಶಾಂತ್ ಹೇಳಿದ ಕಥೆ ಯನ್ನು 25ನೇ ಚಿತ್ರಕ್ಕೆ ಇಟ್ಟುಕೊಂಡಿದ್ದಾರಂತೆ ಪ್ರಭಾಸ್. ಪೌರಾಣಿಕ ಹಿನ್ನೆಲೆಯ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಈ ಚಿತ್ರವು 2023ರಲ್ಲಿ ಪ್ರಾರಂಭ ವಾಗಲಿದ್ದು, ಅಷ್ಟರಲ್ಲಿ ಪ್ರಶಾಂತ್, "ಸಲಾರ್', ಜ್ಯೂನಿಯರ್ ಎನ್ಟಿಆರ್ ಅಭಿನಯದ ಚಿತ್ರ ಗಳನ್ನು ಮುಗಿಸಿ, ಈ ಚಿತ್ರಕ್ಕೆ ಕೈಹಾಕಲಿದ್ದಾರೆ.