ನೀಲ್​ಗೆ ಅಲ್ಲು ಬುಲಾವ್

mahesh feb 19 2020
Published on

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ತೆಲುಗಿನ ಪ್ರಿನ್ಸ್ ಮಹೇಶ್ ಬಾಬು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ಸುದ್ದಿ ಬಹಳ ಹಿಂದೆಯೇ ಹಬ್ಬಿ ಹಾಗೇ ಮಾಯವಾಗಿತ್ತು. ಈಗ ಮತ್ತೆ ಇವರಿಬ್ಬರ ಕಾಂಬಿನೇಷನ್​ಗೆ ಜೀವ ಬಂದಿದೆ.

ಈ ಬಾರಿ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ವಪಕ ಅಲ್ಲು ಅರವಿಂದ್ ನಿರ್ಮಾಣ ಮಾಡುತ್ತಾರಂತೆ. ಹೌದು, ಮಹೇಶ್ ಬಾಬು ಈಗಾಗಲೇ ಅಲ್ಲು ಅರವಿಂದ್​ಗೆ ಡೇಟ್ಸ್ ನೀಡಿದ್ದಾರೆ. ಅದಕ್ಕಾಗಿ ಅಲ್ಲು ಅರವಿಂದ್ ನಿರ್ದೇಶಕರು ಮತ್ತು ಉತ್ತಮ ಕಥೆಯನ್ನು ಹುಡುಕುತ್ತಿ ದ್ದಾರೆ. ಈ ಸಮಯದಲ್ಲಿ ಅರವಿಂದ್ ಅವರಿಗೆ ಪ್ರಶಾಂತ್ ನೀಲ್ ಬಗ್ಗೆ ಮಹೇಶ್ ಬಾಬು ಅವರೇ ಹೇಳಿದ್ದಾರೆ ಎಂಬ ಸುದ್ದಿ ಟಾಲಿವುಡ್​ನಿಂದ ಬಂದಿದೆ. ಪ್ರಶಾಂತ್ ನೀಲ್ ಈ ಹಿಂದೆಯೇ ಮಹೇಶ್ ಬಾಬುಗೆ ಕಥೆ ಹೇಳಿದ್ದರು. ಆ ಕಥೆಯೂ ಮಹೇಶ್ ಬಾಬುಗೆ ಇಷ್ಟವಾಗಿತ್ತು, ಅದೇ ಕಥೆಯನ್ನು ಅಲ್ಲು ಅರವಿಂದ್​ಗೆ ಅವರು ಹೇಳಿದ್ದಾರಂತೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net