

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ 'ಅರ್ಜುನ' ಚಿತ್ರದ ನಂತರವೇ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಪಿ.ಸಿ. ಶೇಖರ್ ಇನ್ನೊಂದು ಚಿತ್ರ ಮಾಡುತ್ತಾರೆ ಎಂಬ ಸು್ದಿ ಇತ್ತು. ಆದರೆ, ಇಬ್ಬರೂ ಬೇರೆಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡ ಕಾರಣ, ಆ ಚಿತ್ರ ಶುರುವಾಗಲೇ ಇಲ್ಲ.
ಇದೀಗ, 'ಅರ್ಜುನ' ನಂತರ ಶೇಖರ್ ಮತ್ತು ಪ್ರಜ್ವಲ್ ಇನ್ನೊಂದು ಹೊಸ ಚಿತ್ರಕ್ಕೆ ಜತೆಯಾಗುತ್ತಿದ್ದಾರೆ. ಈ ಹಿಂದೆ ಶೇಖರ್ ನಿರ್ದೇಶನದ 'ದಿ ಟೆರರಿಸ್ಟ್' ಚಿತ್ರವನ್ನು ನಿರ್ದೇಶಿಸಿದ್ದ ಅಲಂಕಾರ್ ಪಾಂಡಿಯನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ‘ಇಬ್ಬರ ನಡುವಿನ ಮುದ್ದಿನ ರಾಣಿ’ ಯಾರು?
ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಎನ್ನುತ್ತಾರೆ ಶೇಖರ್. 'ಚಿತ್ರದ ವಿಶೇಷತೆಯೆಂದರೆ ಇದೊಂದು ರಿಯಲ್ ಟೈಮ್ ಸಿನಿಮಾ. ಅಂದರೆ ಕೆಲವೇ ಗಂಟೆಗಳ ಅಂತರದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಕಥೆಯು ನಾನ್-ಲೀನಿಯರ್ ಮಾದರಿಯಲ್ಲಿ ಸಾಗಲಿದ್ದು, ಬಹಳ ಫಾಸ್ಟ್ ಆಗಿರುತ್ತದೆ. ಇಡೀ ಚಿತ್ರವನ್ನು ಹೆಗಲ ಮೇಲೆ ಕ್ಯಾಮೆರಾ ಇಟ್ಟುಕೊಂಡು ಬಹಳ ಕ್ಯಾಂಡಿಡ್ಗೆ ಆಗಿ ಚಿತ್ರೀಕರಿಸಲಾಗುತ್ತದೆ' ಎಂದು ನಿರೂಪಣಾ ತಂತ್ರದ ಬಗ್ಗೆ ವಿವರಿಸುತ್ತಾರೆ ಶೇಖರ್.
ಈ ಚಿತ್ರದಲ್ಲಿ ಪ್ರಜ್ವಲ್, ಕ್ಯಾಬ್ ಡ್ರೈವರ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು ಅವರ ಪಾತ್ರದ ಲುಕ್ ಸಹ ವಿಭಿನ್ನವಾಗಿದ್ದು, ಸದ್ಯ ಡಿಸೈನ್ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಜ್ವಲ್ ಅವರ ಲುಕ್ ಮತ್ತು ಚಿತ್ರದ ಹೆಸರನ್ನು ಅನಾವರಣ ಮಾಡುವುದಾಗಿ ಶೇಖರ್ ಹೇಳುತ್ತಾರೆ.
ಇದನ್ನೂ ಓದಿ: ಇದೇ ‘ಗುಳ್ಟು’ ನವೀನ್ ಅಭಿನಯದ ಹೊಸ ಚಿತ್ರ …
ಇನ್ನು ತಂತ್ರಜ್ಱರ ವಿಷಯವಾಗಿ ಹೇಳುವುದಾದರೆ, ಚಿತ್ರದ ಛಾಯಾಗ್ರಾಹಕ ಆಯ್ಕೆ ಇನ್ನೂ ಆಗಿಲ್ಲ. ಆದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುವುದು ಬಹುತೇಕ ಪಕ್ಕಾ ಆಗಿದೆ. ಶೇಖರ್ ಅವರ ಮೊದಲ ಚಿತ್ರ 'ನಾಯಕ'ನಿಂದ ಪ್ರಾರಂಭಿಸಿ, ಹಲವು ಚಿತ್ರಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ.
ಈ ಹೆಸರಿಡದ ಚಿತ್ರದ ಚಿತ್ರೀಕರಣ ಮುಂದಿನ ವರ್ಷದ ಆರಂಭದಿಂದ ಪ್ರಾರಂಭವಾಗಲಿದ್ದು, ಸುಮಾರು 50 ದಿನಗಳ ಕಾಲ ಬೆಂಗಳೂರು ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಯಲಿದೆ.