ಪ್ರಜ್ವಲ್​ ನಿಜಕ್ಕೂ ಜಂಟಲ್​ವುನ್

PRAJVAL
Published on

ನಾಯಕಿಯರೆಂದರೆ ಬರೀ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಈ ಕಾಲದಲ್ಲಿ, ನಿಶ್ವಿಕಾ ನಾಯ್ಡು ‘ಜಂಟಲ್​ವುನ್’ ಚಿತ್ರ ಪೂರ್ತಿ ಸೀರೆಯಲ್ಲೇ ನಟಿಸಿದ್ದಾರೆ. ಜತೆಗೆ ಮೊದಲ ಬಾರಿಗೆ ತೆರೆ ಮೇಲೆ ವೈದ್ಯೆಯೂ ಆಗಿದ್ದಾರಂತೆ. ತಮ್ಮ ಪಾತ್ರದ ಅನುಭವ ಮತ್ತು ಸಿನಿಮಾ ಕುರಿತ ಮಾಹಿತಿಯನ್ನು ಅವರು ಸಿನಿವಾಣಿ ಜತೆ ಹಂಚಿಕೊಂಡಿದ್ದಾರೆ.

‘ಜಂಟಲ್​ವುನ್’ ಸಿನಿಮಾ ಕಮರ್ಷಿಯಲ್ ಅಂಶಗಳ ಜತೆ ಸಾಮಾಜಿಕ ಕಳಕಳಿಯನ್ನೂ ತಿಳಿಸಲು ಹೊರಟಿರುವ ಕಥೆ. ಹಾಗಾಗಿ ನಾನು ಮೊದಲ ಬಾರಿ ಕೇಳಿದಾಗಲೇ ಕಥೆ ಓಕೆ ಮಾಡಿದೆ’ ಎನ್ನುತ್ತಾರೆ ನಿಶ್ವಿಕಾ ನಾಯ್ಡು. ‘ಶ್ರೇಯಸ್ ನಾಯಕತ್ವದ ‘ಪಡ್ಡೆಹುಲಿ’ ಡಬ್ಬಿಂಗ್ ಮಾಡುತ್ತಿದ್ದ ಸಮಯದಲ್ಲಿ ನಿರ್ದೇಶಕ ಜಡೇಶ್​ಕುಮಾರ್ ಈ ಕಥೆ ಹೇಳಿದರು. ನನಗೆ ಕನ್ನಡದಲ್ಲಿ ಇದೊಂದು ಬೇರೆ ಮಾದರಿಯ ಸಿನಿಮಾ ಅನಿಸಿತು.

ಇದರಲ್ಲಿ ಹ್ಯೂಮನ್ ಟ್ರಾಫಿಕಿಂಗ್ ಜತೆಗೆ ‘ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಕಾಯಿಲೆ ಬಗ್ಗೆಯೂ ಹೇಳಲಾಗುತ್ತಿದೆ. ಈ ರೀತಿಯ ಕಂಟೆಂಟ್ ತೆಗೆದುಕೊಂಡಾಗ ಕಲ್ಟ್ ಸಿನಿಮಾ ಇಲ್ಲ, ಆರ್ಟ್ ಸಿನಿಮಾ ಮಾಡಿಬಿಡುತ್ತಾರೆ. ಆದರೆ, ಜಡೇಶ್ ಇದನ್ನು ಕಮರ್ಷಿಯಲ್ ಆಗಿ ಹೆಣೆದಿದ್ದರು. ಹಾಗಾಗಿ ಈ ಸಿನಿಮಾ ಖಂಡಿತ ಜನರಿಗೆ ಇಷ್ಟವಾಗುತ್ತದೆ ಎನಿಸಿತು. ಜಡೇಶ್ ಅವರ ಕಥೆ ಮತ್ತು ಅವರು ಚಿತ್ರಕಥೆ ಮಾಡಿಕೊಂಡಿದ್ದ ಶೈಲಿಯೇ ನನಗೆ ಸಿನಿಮಾ ಒಪ್ಪಿಕೊಳ್ಳುವಂತೆ ಮಾಡಿತು’ಎನ್ನುವುದು ನಿಶ್ವಿಕಾ ನಾಯ್ಡು ಅವರ ಅಭಿಪ್ರಾಯ.

ನಾವಿಬ್ಬರೂ ಈಗ ಒಳ್ಳೇ ಸ್ನೇಹಿತರು ‘ನಾಯಕ ನಟ ಪ್ರಜ್ವಲ್ ದೇವರಾಜ್​ಗೆ ಸಿನಿಮಾದ ಈ ಟೈಟಲ್ ಬಹಳ ಸೂಕ್ತ ಆಗುತ್ತದೆ. ಏಕೆಂದರೆ ಅವರು ನಿಜವಾದ ಜಂಟಲ್​ವುನ್’ ಎನ್ನುವ ನಿಶ್ವಿಕಾ, ‘ಪ್ರಜ್ವಲ್ ದೇವರಾಜ್ ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾನು ಇದೇ ಮೊದಲ ಸಲ ಅವರ ಜತೆ ನಟಿಸಿದ್ದೇನೆ.

ಆರಂಭದಲ್ಲಿ ಅವರು ದೊಡ್ಡ ನಟ ಎಂಬ ನರ್ವಸ್ ಇತ್ತು. ಆದರೆ ಅವರೇ ಬಂದು ಮಾತನಾಡಿಸಲು ಆರಂಭಿಸಿದರು. ನಾವಿಬ್ಬರೂ ಈಗ ತುಂಬ ಒಳ್ಳೆಯ ಸ್ನೇಹಿತರಾಗಿದ್ದೇವೆ. ಇನ್ನು ಹಾಡು ರಿಲೀಸ್ ಆದಾಗ ‘ನಿಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ’ ಎಂದು ಎಲ್ಲರೂ ಹೇಳುತ್ತಿದ್ದಾರೆ. ಚಿತ್ರೀಕರಣದ ಆರಂಭದಿಂದಲೂ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇ ಈ ಕೆಮಿಸ್ಟ್ರಿ ಚೆನ್ನಾಗಿರಲು ಮುಖ್ಯ ಕಾರಣ. ಹಾಗಾಗಿ ಪ್ರಜ್ವಲ್ ದೇವರಾಜ್ ಅವರ ಜತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎಂದು ಹೇಳುತ್ತಾರೆ ನಿಶ್ವಿಕಾ.

ಗುರು ದೇಶಪಾಂಡೆಗೆ ಧನ್ಯವಾದಗಳು

‘ಗುರು ದೇಶಪಾಂಡೆಯವರ ನಿರ್ದೇಶನದಲ್ಲಿ ನಾನು ಕೆಲಸ ಮಾಡಿದ್ದೆ. ಈಗ ಅವರ ನಿರ್ವಣದಲ್ಲಿಯೂ ಕೆಲಸ ಮಾಡಿದ್ದು ನನಗೆ ಹೊಸ ಅನುಭವ. ಉತ್ತಮವಾದ ನಿರ್ದೇಶಕರೊಬ್ಬರು ಮತ್ತೊಬ್ಬರಿಗೆ ಸಿನಿಮಾ ನಿರ್ಮಾಣ ಮಾಡುವುದು ಬಹಳ ದೊಡ್ಡ ವಿಚಾರ. ಈ ಕೆಲಸವನ್ನು ಗುರು ಅವರು ಅದ್ಭುತವಾಗಿ ಮಾಡಿದ್ದಾರೆ. ಪ್ರತಿ ದಿನ

ಸೆಟ್​ನಲ್ಲಿರುತ್ತಿದ್ದರು. ಸಲಹೆ ಸೂಚನೆಗಳೊಂದಿಗೆ ಸಿನಿಮಾ ಉತ್ತಮಗೊಳಿಸಲು ಸಹಾಯ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿಸಿದಷ್ಟೂ ದಿನ ನಾನು ನನ್ನ ಕುಟುಂಬದ ಜತೆ ಇದ್ದೇನೇನೋ ಎನಿಸುತ್ತಿತ್ತು. ಈ ಚಿತ್ರ ಇಷ್ಟು ಚೆನ್ನಾಗಿ ಬಂದಿದೆಯೆಂದರೆ ಅದಕ್ಕೆ ಗುರುದೇಶಪಾಂಡೆ ಅವರ ಕೊಡುಗೆ ಹೆಚ್ಚು. ಜತೆಗೆ ಅವರ ಮೊದಲ ನಿರ್ವಣದ ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ಅವರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ. ಅಲ್ಲದೆ ‘ಜಂಟಲ್​ವುನ್’ ಚಿತ್ರ ಕನ್ನಡದಲ್ಲಿ ವಿಶೇಷ ಕಥೆ ಇರುವ ಸಿನಿಮಾ. ಖಂಡಿತ ಪ್ರೇಕ್ಷಕರು ಥ್ರಿಲ್ ಆಗುವಂತೆ ಸಿನಿಮಾ ಮಾಡಿದ್ದೇವೆ’ ಎಂದು ಚಿತ್ರತಂಡ ಮತ್ತು ನಿರ್ವಪಕರ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ.

ಸಿಂಪಲ್ ನಿರ್ದೇಶಕರು

ಜಡೇಶ್ ಕುಮಾರ್ ನೋಡಲು ಮಾತ್ರ ಸಿಂಪಲ್ ಆಗಿ ಕಾಣುತ್ತಾರೆ. ಆದರೆ ಅವರ ಕಥೆ ಮತ್ತು ನಿರೂಪಣಾ ಶೈಲಿ, ಅದನ್ನು ಕಲಾವಿದರಿಗೆ ಹೇಳಿ ಒಪ್ಪಿಸಿದ್ದು ಎಲ್ಲವೂ ನನಗೆ ಗೊತ್ತಿದೆ. ಅವರು ಈ ಚಿತ್ರ ರಿಲೀಸ್ ಆದ ಮೇಲೆ ಸ್ಯಾಂಡಲ್​ವುಡ್​ನ ಬಹು ಬೇಡಿಕೆಯ ನಿರ್ದೇಶಕರಾಗುತ್ತಾರೆ.

ಈ ಚಿತ್ರದ ಕಥೆ ಮಾಡಿಕೊಂಡ ಮೇಲೆ, ‘ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಕಾಯಿಲೆ ಯಾರಿಗಾದರೂ ಇದೆಯಾ ಎಂದು ಹುಡುಕಿದ್ದರು. ಜತೆಗೆ ಅದರ ಬಗ್ಗೆ ಅವರು ರಿಸರ್ಚ್ ಮಾಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಪಸ್ವಿನಿ ಪಾತ್ರವನ್ನು ಅದ್ಭುತವಾಗಿ ಬರೆದಿದ್ದಾರೆ. ಅವರ ಕೆಲಸವನ್ನು ತೆರೆ ಮೇಲೆ ನೋಡಿದರೆ, ಜಡೇಶ್ ಅವರ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಗುತ್ತದೆ’ ಎಂದು ನಿರ್ದೇಶಕರ ಬಗ್ಗೆಯೂ ಮೆಚ್ಚುಗೆಯ ಮಾತನಾಡುತ್ತಾರೆ.

ದರ್ಶನ್ ಬಗ್ಗೆ ಅಭಿಮಾನ

‘ಜಂಟಲ್​ವುನ್’ ಸಿನಿಮಾದ ಮೂಲಕ ಒಬ್ಬ ನಿರ್ದೇಶಕರು ನಿರ್ವಪಕರಾಗುತ್ತಿದ್ದಾರೆ. ಒಂದು ಚಿತ್ರವನ್ನು ನಿರ್ದೇಶನ ಮಾಡಿರುವವರು ಎರಡನೇ ಬಾರಿಗೆ ಹೊಸ ರೀತಿಯ ಕಥೆ ಜನರಿಗೆ ಹೇಳಲು ಪ್ರಯತ್ನ ಮಾಡುತ್ತಿದ್ದಾರೆ. ಇವರ ಈ ಶ್ರಮಕ್ಕೆ ಸ್ಯಾಂಡಲ್​ವುಡ್​ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದ್ದು ನನಗೆ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿತು ಎಂದರು ನಿಶ್ವಿಕಾ.

ಗ್ಲಾಮರ್ ಗೊಂಬೆಯ ಟ್ರೆಡಿಷನಲ್ ಲುಕ್

ಈ ವರೆಗೂ ನಿಶ್ವಿಕಾ ಗ್ಲಾಮರ್ ಗೊಂಬೆಯಾಗಿ ಬಗೆಬಗೆಯ ಕಾಸ್ಟ್ಯೂಮ್ಳಲ್ಲಿ ಮಿಂಚಿದ್ದಾರೆ. ಆದರೆ, ‘ಜಂಟಲ್​ವುನ್’ ಸಿನಿಮಾದಲ್ಲಿ ಪೂರ್ತಿ ಸೀರೆಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ‘ನಾನು ಈ ಹಿಂದಿನ ಸಿನಿಮಾಗಳಲ್ಲಿ ಕಾಲೇಜು ಸ್ಟುಡೆಂಟ್, ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಅಲ್ಲೆಲ್ಲ ಎಲ್ಲ ರೀತಿಯ ಡ್ರೆಸ್​ಗಳನ್ನು ಹಾಕಿದ್ದೇನೆ. ಆದರೆ ‘ಜಂಟಲ್​ವುನ್’ ಹೊಸತನದಿಂದ ಕೂಡಿದೆ. ಚಿತ್ರದುದ್ದಕ್ಕೂ ಸೀರೆಯಲ್ಲಿ ಕಾಣಿಸುತ್ತೇನೆ. ಏಕೆಂದರೆ ನಾನು ಇಲ್ಲಿ ಡಯಟಿಷಿಯನ್ ಪಾತ್ರದಲ್ಲಿ ನಟಿಸಿದ್ದೇನೆ.

ಅಪ್ಪ-ತಂಗಿ ಎಲ್ಲರೂ ಇರುತ್ತಾರೆ, ಎಲ್ಲರ ಆರೋಗ್ಯ ನೋಡಿಕೊಳ್ಳುವಂಥ ಪಾತ್ರ ಇದಾಗಿದೆ. ಹೀಗೆ ಸಿನಿಮಾ ತುಂಬ ಸೀರೆಯಲ್ಲೇ ಕಾಣಿಸಿಕೊಂಡಾಗ, ಇದೇ ರೀತಿಯ ಪಾತ್ರಗಳಿಗೆ ಫಿಕ್ಸ್ ಆಗಿಬಿಡ್ತೀರಾ ಎಂದು ಕೆಲವರು ಕೇಳುತ್ತಾರೆ. ಆದರೆ ನಾನು ಸಿನಿಮಾದಿಂದ ಸಿನಿಮಾಗೆ ಹೊಸ ಹೊಸ ಪಾತ್ರಗಳಲ್ಲಿ ಎದುರಾಗಲು ಇಷ್ಟಪಡುತ್ತೇನೆ. ಜತೆಗೆ ಕಲಾವಿದರು ಎಂದಿಗೂ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಎಂಬುದು ನನ್ನ ಅಭಿಪ್ರಾಯ’ ಅಂತಾರವರು.

ಪ್ರತಿ ಸಿನಿಮಾದಿಂದ ಸಿನಿಮಾಗೆ ಹೊಸ ರೀತಿಯ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನ ಆಸೆ. ‘ಜಂಟಲ್​ವುನ್’ ಚಿತ್ರ ನನ್ನ ಕರಿಯರ್​ನಲ್ಲಿ ಒಂದೊಳ್ಳೆಯ ಮೈಲಿಗಲ್ಲು ಆಗುತ್ತದೆ. ತಪಸ್ವಿನಿ ಎಂಬ ಪಾತ್ರದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತೇನೆ. | ನಿಶ್ವಿಕಾ ನಾಯ್ಡು ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net