ಟಾಲಿವುಡ್ ನಟರ ಪೈಕಿ ಈ ದಾಖಲೆಯನ್ನು ಹೊಂದಿದ ಏಕೈಕ ನಟ ಡಾರ್ಲಿಂಗ್ ಪ್ರಭಾಸ್!

prabhas
Published on

ಆಂಧ್ರಪದೇಶ: ಪ್ಯಾನ್ ಇಂಡಿಯಾ(Pan India) ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್(Darling Prabhas) ಇದೀಗ ಮತ್ತೊಂದು ದಾಖಲೆಯನ್ನು ಹೊಂದಿದ್ದು, ಈ ದಾಖಲೆ ಮಾಡಿದ ಏಕೈಕ ಟಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ಪ್ರಭಾಸ್ ಪಾತ್ರರಾಗಿದ್ದಾರೆ.

ನಟ ಪ್ರಭಾಸ್ ಅಭಿನಯದ, ಓಂ ರಾವುತ್ ನಿರ್ದೇಶನದ ಆದಿಪುರುಷ್(Adipurush)​ ಚಿತ್ರ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಟಾಲಿವುಡ್ ನಟರ ಪೈಕಿ ಪ್ರಭಾಸ್ ಅಭಿನಯದ ಬಾಹುಬಲಿ, ಬಾಹುಬಲಿ-2 ಮತ್ತು ಸಾಹೋ ಚಿತ್ರಗಳ ನಂತರ ಅಮೇರಿಕದಲ್ಲಿ 3 ಮಿಲಿಯನ್ ಡಾಲರ್ ಗಡಿ ದಾಟಿದ ನಾಲ್ಕನೇ ಚಿತ್ರ ಆದಿಪುರುಷ್ ಆಗಿದೆ! ಸದ್ಯ ತಾವು ನಟಿಸಿದ 3 ಚಿತ್ರಗಳ ನಂತರ 4ನೇ ಚಿತ್ರ ಆದಿಪುರುಷ್ ಆಗಿದ್ದು, ಇದು ಪ್ರಭಾಸ್ ಅವರಿಗೆ ವಿಶೇಷ ಗೌರವವನ್ನು ತಂದುಕೊಟ್ಟಿದೆ.

ಟಾಲಿವುಡ್​ ನಟರಾದ ರಾಮ್​ ಚರಣ್‌ ಅಭಿನಯದ 2 ಚಿತ್ರಗಳು, ಎನ್‌ಟಿಆರ್‌, ಅಲ್ಲು ಅರ್ಜುನ್‌ ಮತ್ತು ಮಹೇಶ್‌ ಬಾಬು ಅವರ ತಲಾ ಒಂದು ಸಿನಿಮಾಗಳು ಮೂರು ಮಿಲಿಯನ್‌ ಡಾಲರ್‌ ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ಆದ್ರೆ, ಈ ಟಾಪ್ ನಟರ ಪೈಕಿ ಪ್ರಭಾಸ್ ಅಭಿನಯದ ನಾಲ್ಕು ಚಿತ್ರಗಳು ಕೂಡ ಅಮೇರಿಕದಲ್ಲಿ 3 ಕೋಟಿ ಡಾಲರ್ ಗಳಿಕೆ ಮಾಡಿರುವುದು ಈ ದಾಖಲೆಗೆ ಪ್ರಮುಖ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net