VIDEO: ಅತಿ ವೇಗದ ಚಾಲನೆ ಮಾಡಿ ಟ್ರೋಲ್​​ ಆದ ಬಾಹುಬಲಿ ನಟ ಪ್ರಭಾಸ್​! ನೆಟ್ಟಿಗರು ಹೇಳಿದ್ದು ಹೀಗೆ

Prabhas
Published on

ಹೈದರಾಬಾದ್​: ಅತಿ ವೇಗದ ಚಾಲನೆ ಮಾಡುವ ಮೂಲಕ ನಟ ಪ್ರಭಾಸ್​ ಈಗ ಭಾರೀ ಟೀಕೆಗೊಳಗಾಗಿದ್ದಾರೆ. ನಾಗ್​ ಅಶ್ವಿನ್​ ನಿರ್ದೇಶನದ ಕೆ ಸಿನಿಮಾ ಸೆಟ್​ನಿಂದ ತನ್ನ ಲ್ಯಾಂಬೊರ್ಗಿನಿ ಕಾರಿನಲ್ಲಿ ತಾವೇ ಚಾಲನೆ ಮಾಡಿ ಹೊರಟ ಪ್ರಭಾಸ್​ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.

ಹೈದರಾಬಾದ್​ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ಬಳಿಕ ಸೆಟ್​ನಿಂದ ಪ್ರಭಾಸ್ ತೆರಳಿದ್ದು ತನ್ನ ಲ್ಯಾಂಬೊರ್ಗಿನಿ ಕಾರಿನ ಮೂಲಕ, ಆದರೆ ಶರವೇಗದಲ್ಲಿ ಚಾಲನೆ ಮಾಡಿ ಹೊರಟಿರುವ ದೃಶ್ಯ ಭಾರೀ ವೈರಲ್​ ಆಗುತ್ತಿದೆ.

ಕೆಲವರು ಚಾಲನೆ ನಿಧಾನವಾಗಿ ಮಾಡಿ, ನಿಮ್ಮ ಮೇಲೆ ನಿರ್ಮಾಪಕರು 2000 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದಿದ್ದಾರೆ. ಇನ್ನೂ ಸ್ಪೋರ್ಟ್​ ಕಾರಿನಂತಿರುವುದರಿಂದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿರಬಹುದು ಎಂದೂ ಕೆಲವರು ಹಾಸ್ಯ ಮಾಡಿದ್ದಾರೆ.

ಏನೇ ಆದರೂ ಬಾಹುಬಲಿ ಪ್ರಭಾಸ್​ ಇಷ್ಟು ವೇಗದ ಚಾಲನೆ ಒಳ್ಳೆದಲ್ಲ ಎಂದೂ ಕೆಲವರು ತನ್ನ ನೆಚ್ಚಿನ ನಟನಿಗೆ ಸಲಹೆ ನೀಡಿದ್ದಾರೆ. ಕಳೆದ ವರ್ಷವೇ ಈ ಕಾರನ್ನು ಪ್ರಭಾಸ್​ ಖರೀದಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net