ಆಂಧ್ರ ಪ್ರದೇಶ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಅದರಲ್ಲೂ, ಆಂಧ್ರ ಪ್ರದೇಶದ ತಿರುಪತಿ, ಚಿತ್ತೂರು, ನೆಲ್ಲೂರು, ವೈಜಾಗ್, ಗೋದಾವರಿ ಪ್ರದೇಶಗಳಲ್ಲಿ ಸಾವಿರಾರು ಬೆಳೆ ಹಾನಿ ಮತ್ತು ಜನರು ನೆಲ, ಮನೆ, ರಸ್ತೆಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಜನರಿಗೆ ಸಹಾಯ ಮಾಡಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಆದರೆ, ಖುಷಿಯ ವಿಚಾರವೆಂದರೆ ಹಲವು ಸಿನಿ ತಾರೆಯರು ಈ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಅಂತಹ ಬಹಳಷ್ಟು ಸಿನಿ ತಾರೆಯರ ಪೈಕಿ ಸದ್ಯ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿರುವುದು ತೆಲುಗು ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್.