ಪುನೀತ್ ಸೈಕಲ್​ ಸವಾರಿ; ಈ ಸಲ ಕಾಂಕ್ರೀಟ್​ ನಾಡಲ್ಲಲ್ಲ, ಬದಲಿಗೆ ಗುಡ್ಡಗಾಡು ಪ್ರದೇಶದಲ್ಲಿ...

EiWJb60U4AADCQN
Published on

ಬೆಂಗಳೂರು: ಫಿಟ್​ನೆಸ್​ ವಿಚಾರದಲ್ಲಿ ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಒಂದು ಹೆಜ್ಜೆ ಮುಂದೆ. ಲಾಕ್ ಡೌನ್​ ಶುರುವಾದ ಮೇಲಂತೂ ಸೋಷಿಯಲ್ ಮೀಡಿಯಾದಲ್ಲಿ ಒಂದರ ಮೇಲೊಂದರಂತೆ ವಿಡಿಯೋ ಅಪ್​ಲೋಡ್​ ಮಾಡಿ, ಸದಾ ಸುದ್ದಿಯಲ್ಲಿದ್ದರು. ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದರು.

ಇತ್ತೀಚೆಗಷ್ಟೇ ಮುಖಕ್ಕೆ ಮಾಸ್ಕ್​ ಧರಿಸಿ ಯಾರಿಗೂ ಗೊತ್ತಾಗದ ಹಾಗೆ ಸೈಕಲ್​ನಲ್ಲಿಯೇ ಬೆಂಗಳೂರು ಸುತ್ತಾಡಿ ಬಂದಿದ್ದರು. ಸದಾಶಿವ ನಗರದ ಮನೆಯಿಂದ ವಿಧಾನಸೌಧದ ವರೆಗೂ ಸೈಕಲ್​ ಸವಾರಿ ಮಾಡಿ, ಹಾಗೆ ಸುತ್ತಾಡಿದ ವಿಡಿಯೋ ತುಣುಕನ್ನು ಪಿಆರ್​ಕೆ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದರು.

ಇದೀಗ ನಗರದ ಸಹವಾಸ ಬಿಟ್ಟು, ನಗರದಿಂದ ಆಚೆಗೆ ಸೈಕಲ್​ನಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ ಪುನೀತ್​ ರಾಜಕುಮಾರ್​. ನಾಲ್ವರು ಸ್ನೇಹಿತರ ಜತೆಗೂಡಿ ಸೈಕಲ್​ನಲ್ಲಿಯೇ ಸುತ್ತಾಡಿದ್ದಾರೆ. ಹಾಗೆ ಸುತ್ತಾಡಿದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಆರೋಗ್ಯದ ಬಗ್ಗೆ ಪುನೀತ್​ಗಿರುವ ಕಾಳಜಿ ಕಂಡು ಅಭಿಮಾನಿಗಳು ತಾವೂ ಈ ಕಾರ್ಯಕ್ಕೆ ಮುಂದಾಗುವುದಾಗಿ ಹೇಳಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net