ಕರೊನಾದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್​ ಹುಟ್ಟುಹಬ್ಬವೂ ಕ್ಯಾನ್ಸಲ್​

Puneeth
Published on

ಕರೋನ ವೈರಸ್ ಹಬ್ಬುವ ಭೀತಿಯಿಂದ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ ಆಚರಣೆ ಸಹ ಕ್ಯಾನ್ಸಲ್ ಆಗಿದೆ. ಇನ್ನು, ಪುನೀತ್ ಅವರು ತಮ್ಮ ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

ಪುನೀತ್ ಪ್ರತಿ ವರ್ಷ ಮಾರ್ಚ್ 17ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಸಂಭ್ರಮದಿಂದ ಆಚರಿಸಿಕೊಳ್ಳುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಾರಿ ಸಹ ಪುನೀತ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸುವುದರಲ್ಲಿದ್ದರು. ಆದರೆ, ಕರೋನಾ ಸೋಂಕು ಹರಡುವ ಭಯದ ಹಿನ್ನೆಲೆಯಲ್ಲಿ ಈ ಬಾರಿಯ ಪುನೀತ್ ಅವರ ಹುಟ್ಟುಹಬ್ಬವನ್ನು ಕ್ಯಾನ್ಸಲ್ ಮಾಡಲಾಗಿದೆ. ಇಂದು ಸ್ವತಃ ಪುನೀತ್ ಅವರೇ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಮನೆ ಮುಂದೆ ಸೇರದಂತೆ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಮಾತನಾಡುವ ಪುನೀತ್ ಅವರ ಆಪ್ತರಾದ ರಾಜಕುಮಾರ್, ‘ಕರೋನಾ ಕಾರಣದಿಂದ ಹುಟ್ಟು ಹಬ್ಬದ ಸಂಭ್ರಮವನ್ನು ಕ್ಯಾನ್ಸಲ್ ಮಾಡುವ ಆಲೋಚನೆ ನಡೆಯುತ್ತಿದೆ. ಶನಿವಾರ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ’ಎಂದಿದ್ದಾರೆ. ಹುಟ್ಟುಹಬ್ಬ ಆಚರಣೆ ಮಿಸ್ ಆಯಿತು ಎಂದು ಪುನೀತ್ ಅಭಿಮಾನಿಗಳು ದುಃಖ ಪಡಬೇಕಿಲ್ಲ. ಅಭಿಮಾನಿಗಳನ್ನು ಖುಷಿಪಡಿಸುವುದಕ್ಕೆಂದೇ, ಪುನೀತ್ ಅಭಿನಯದ ‘ಯುವರತ್ನ’ ಚಿತ್ರದ ಟೀಸರ್ ಮಾರ್ಚ್ 16ರಂದು ಸಂಜೆ ಆರು ಗಂಟೆಗೆ ಮತ್ತು ‘ಜೇಮ್್ಸ’ ಚಿತ್ರದ ಮೋಷನ್ ಪೋಸ್ಟರ್ 17ರಂದು ಸಂಜೆ ಆರಕ್ಕೆ ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net