

ಬೆಂಗಳೂರು: ಫಸ್ಟ್ಲುಕ್ ಮೂಲಕವೇ ಎಲ್ಲರ ಗಮನಸೆಳೆದಿತ್ತು ರಚಿತಾ ರಾಮ್ ಅಭಿನಯದ ‘ಶಬರಿ - ಸರ್ಚಿಂಗ್ ಫಾರ್ ರಾವಣ’ ಸಿನಿಮಾ. ಇದೀಗ ಈ ರಚಿತಾ ಜನ್ಮದಿನಕ್ಕೆ ಮತ್ತೊಂದು ವಿಶೇಷ ಲುಕ್ ಹೊರಬಂದಿದೆ. ಹಿಂದೆಂದೂ ಕಾಣಿಸದ ಶಾರ್ಟ್ ಹೇರ್, ಗಂಭೀರ ಮುಖಭಾವ ಮತ್ತು ರಗಡ್ ಗೆಟಪ್ನಲ್ಲಿ ರಚಿತಾ ಎದುರಾಗಿದ್ದಾರೆ. ‘ಶಬರಿ - ಸರ್ಚಿಂಗ್ ಫಾರ್ ರಾವಣ’ ಚಿತ್ರವನ್ನು ನವೀನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.
ರಚಿತಾ ವಿಶೇಷ ಲುಕ್ ಬಗ್ಗೆ ಮಾತನಾಡಿರುವ ಅವರು, ‘ರಚಿತಾ ಅವರ ಪಾಲಿಗಿದು ಹೊಸ ರೀತಿಯ ಸಿನಿಮಾ. ಗ್ಲಾಮರಸ್ ಆಗಿ ಅವರನ್ನು ಇಲ್ಲಿಯವರೆಗೂ ನೋಡಿರಬಹುದು. ಈ ಚಿತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದೇವೆ. ಎರಡು ಶೇಡ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಈಗ ಹೊರಬಂದಿರುವ ಲುಕ್ ಸಹ ಒಂದು’ ಎಂಬುದು ನವೀನ್ ಮಾತು. ಮೈಸೂರು ಸೇರಿ ಹಲವೆಡೆ ಶೇ. 30ರಷ್ಟು ಚಿತ್ರೀಕರಣ ಮುಗಿಸಿರುವ ತಂಡ, ಆಯುಧ ಪೂಜೆ ಬಳಿಕ ಮತ್ತೆ ಶೂಟಿಂಗ್ ಆರಂಭಿಸಲಿದೆ. ಕೆಕೆ ಪ್ರೊಡಕ್ಷನ್ಸ್ ಮತ್ತು ಎಟಿಎಂ ಸ್ಟುಡಿಯೋಸ್ ಈ ಚಿತ್ರ ನಿರ್ವಿುಸುತ್ತಿವೆ.
ನೋಡುತಾ ನನ್ನನೇ ... ಹಾಡು ಬಂತು...: ರಚಿತಾ ರಾಮ್ ಬರ್ತ್ಡೇ ಪ್ರಯುಕ್ತ ‘ಮಾನ್ಸೂನ್ ರಾಗ’, ‘ಲವ್ ಯೂ ರಚ್ಚು’, ‘ವೀರಂ’ ಚಿತ್ರತಂಡಗಳಿಂದ ವಿಶೇಷ ಪೋಸ್ಟರ್ಗಳು ಉಡುಗೊರೆ ರೂಪದಲ್ಲಿ ಹೊರಬಂದಿವೆ. ಅಜೇಯ್ ರಾವ್ ಜತೆಗಿನ ‘ಲವ್ ಯೂ ರಚ್ಚು’ ಚಿತ್ರದಿಂದ ‘ನೋಡುತಾ ನನ್ನನೇ ...’ ಹಾಡು ಸಹ ಬಿಡುಗಡೆಯಾಗಿದೆ.