ಲಂಡನ್ ಕೆಫೆಯಲ್ಲೊಂದು ಆಪರೇಷನ್; ಕವೀಶ್-ಮೇಘಾ ಚಿತ್ರಕ್ಕೆ ಹೆಸರು ಫೈನಲ್

Kaveesh
Published on

ಬೆಂಗಳೂರು: ಗಣೇಶ್ ಅಭಿನಯದ ‘ತ್ರಿಬ್ಬಲ್ ರೈಡಿಂಗ್’ ಮತ್ತು ‘ಡಾರ್ಲಿಂಗ್’ ಕೃಷ್ಣ ಅಭಿನಯದ ‘ದಿಲ್ ಪಸಂದ್’ಗಳಲ್ಲದೆ ಇನ್ನೊಂದು ಚಿತ್ರ ಒಪ್ಪಿಕೊಂಡಿದ್ದರು ‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ. ಕವೀಶ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾದರೂ, ಹೆಸರು ಪಕ್ಕಾ ಆಗಿರಲಿಲ್ಲ. ಈಗ ಹೆಸರು ಫೈನಲ್ ಆಗಿದ್ದಷ್ಟೇ ಅಲ್ಲ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಅಂದಹಾಗೆ, ಚಿತ್ರದ ಹೆಸರೇನು ಗೊತ್ತಾ? ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’. ಹೆಸರೇನೋ ವಿಚಿತ್ರವಾಗಿದೆಯಲ್ಲಾ ಎಂದನಿಸಬಹುದು. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸಾಕಷ್ಟು ರೋಚಕ ವಿಷಯಗಳಿವೆಯಂತೆ. ಆದರೆ, ಆಪರೇಷನ್ ಲಂಡನ್ ಕೆಫೆ ಎಂದರೇನು? ಮತ್ತು ಆ ಆಪರೇಷನ್​ನ ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ಚಿತ್ರತಂಡ ರಹಸ್ಯವಾಗಿಟ್ಟಿದೆ.

ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಸಂಪೂರ್ಣವಾಗಲಿದೆ. ಸಡಗರ ರಾಘವೇಂದ್ರ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮುಂತಾದವರು ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net