

ಲಾಕ್ಡೌನ್ ನಂತರ ಚಿತ್ರೀಕರಣ ಪ್ರಾರಂಭಿಸಬಹುದು ಎಂದು ಕರ್ನಾಟಕ ಸರ್ಕಾರವು ಆದೇಶ ನೀಡಿತಾದರೂ, ಬಹಳಷ್ಟು ಜನ ಚಿತ್ರೀಕರಣ ಮಾಡುವುದಕ್ಕೆ ಮುಂದೆ ಬರಲಿಲ್ಲ. ಹೀಗಿರುವಾಗಲೇ ನಟ-ನಿರ್ದೇಶಕ ಆಸ್ಕರ್ ಕೃಷ್ಣ ಒಂದು ಚಿತ್ರವನ್ನು ಪ್ರಾರಂಭಿಸಿದರು. ಅದೇ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬಿಟ್ಟ'.
ಇದನ್ನೂ ಓದಿ: ಇಂದು ಸಂಜೆ ಲೈವ್ ಬರ್ತಿದ್ದಾರೆ ಪುನೀತ್ ರಾಜಕುಮಾರ್
ಹೀಗೆ ಪ್ರಾರಂಭವಾದ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬಿಟ್ಟ' ಚಿತ್ರವು ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಈಗಾಗಲೇ ಬೆಂಗಳೂರು, ಕುಣಿಗಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮುಂದಿನ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ.
ವಿಶೇಷವೆಂದರೆ, ಈ ಚಿತ್ರವನ್ನು ಆಸ್ಕರ್ ಕೃಷ್ಣ ನಿರ್ದೇಶನ ಮಾಡುತ್ತಿರುವುದಷ್ಟೇ ಅಲ್ಲ, ಈ ಚಿತ್ರದಲ್ಲಿ ಹೀರೋ ಆಗಿ ಸಹ ನಟಿಸುತ್ತಿದ್ದಾರೆ. ಈ ಚಿತ್ರವು ಖ್ಯಾತ ಕಾದಂಬರಿಕಾರ ಕೌಂಡಿನ್ಯ ಅವರ 'ಮೈ ಡಿಯರ್ ಫ್ರೆಂಡ್' ಎಂಬ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ. ಈ ಕಾದಂಬರಿಯನ್ನಿಟ್ಟುಕೊಂಡು ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ, ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟ ಲೋಕೇಂದ್ರ ಸೂಯ.
'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬಿಟ್ಟ' ಚಿತ್ರವನ್ನು ಸೆವೆನ್ ರಾಜ್ ಎನ್ನುವವರು ನಿರ್ಮಿಸುತ್ತಿದ್ದು, ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ಮಲಯಾಳಂ ನಟಿ ಗೌರಿ ನಾಯರ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗಗನ ಕುಮಾರ್ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತವಿದೆ.
ಇದನ್ನೂ ಓದಿ: ರಾಧಿಕಾ ಪಂಡಿತ್ ಕೊಟ್ಟ ಸರ್ಪ್ರೈಸ್ ಇದು!
ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇನ್ನೇನು ಪ್ರಾರಂಭವಾಗಲಿದ್ದು, ಈ ವರ್ಷದ ಕೊನೆಯ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.