ತ್ರಿವಿಕ್ರಮ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಟಬು, ಸುಶಾಂತ್ ಎ, ನಿವೇತಾ ಪೇತುರಾಜ್, ಜಯರಾಮ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಭಾರೀ ಹಿಟ್ ಆಗಿತ್ತು. ನಂತರ, ಬುಟ್ಟ ಬೊಮ್ಮಾ ಎಂದೇ ಕರೆಸಿಕೊಳ್ಳುತ್ತಿರುವ ನಟಿ ಪೂಜಾ ಹೆಗ್ಡೆ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, 1.2 ಮಿಲಿಯನ್ಗೂ ಹೆಚ್ಚು ಲೈಕ್ಸ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಪಡೆದಿದೆ. ಜೊತೆಗೆ, ನಟಿಯ ವಿಡಿಯೋ ಮೇಲೆ 4,000ಕ್ಕೂ ಹೆಚ್ಚು ಕಾಮೆಂಟ್ಗಳ ಸುರಿ ಮಳೆಯೇ ಅಭಿಮಾನಿಗಳಿಂದ ಸುರಿದಿದೆ. ಅದೇನೇ ಇರಲಿ, ಈ ವಿಡಿಯೋದಲ್ಲಿ ಅಭಿಮಾನಿಗಳಿಗೆ ಕೇವಲ ಒಂದು ಬುಟ್ಟ ಬೊಮ್ಮಾ ಅಲ್ಲದೇ ಬದಲಿಗೆ ಎರಡು ಬುಟ್ಟ ಬೊಮ್ಮಗಳನ್ನು ಕಾಣುವ ಅದೃಷ್ಟ ದೊರಕಿದೆ ಎಂದೇ ಹೇಳಬೇಕು.