ದಕ್ಷಿಣ ಭಾರತದ ಬುಟ್ಟ ಬೊಮ್ಮಾ ನಟಿ ಪೂಜಾ ಹೆಗ್ಡೆ ಸದ್ಯ ಮೂರು ಭಾಷೆಯ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಒಂದೇ ವರ್ಷದಲ್ಲಿ ಅಂದರೆ 2022ರಲ್ಲಿ ಬರೋಬ್ಬರಿ 5 ಸಿನಿಮಾಗಳ ಬಿಡುಗಡೆಯ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಿದ್ದರೂ, ಬಿಡುವು ಮಾಡಿಕೊಂಡು ಅವರ ತಾಯಿಯ ಜೊತೆ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುಲು ಹೋಗಿದ್ದಾರೆ. ಅಂದಹಾಗೆ, ನಟಿ ಪೂಜಾ ಹೆಗ್ಡೆ ಅವರ ತಾಯಿಯ 60ನೇ ಹುಟ್ಟು ಹಬ್ಬ. ಹಾಗಾಗಿ, ಅಮ್ಮನ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ನಲ್ಲಿ ಆಚರಿಸುತ್ತಿದ್ದಾರೆ ನಟಿ ಪೂಜಾ. ಕುಟುಂಬದವರನ್ನು ಮಾತ್ರ ಮಾಲ್ಡೀವ್ಸ್ಗೆ ಕರೆದುಕೊಂಡು ಹೋಗಿದ್ದಾರೆ ಬುಟ್ಟ ಬೊಮ್ಮಾ.