ಪೂಜಾ ಹೆಗ್ಡೆಯ ವಿಶ್ರಾಂತಿ ಕಸಿದ ರಶ್ಮಿಕಾ ಮಂದಣ್ಣ: ನ್ಯಾಷನಲ್​ ಕ್ರಷ್ ಕಂಡ್ರೆ ಪೂಜಾಗೆ ಭಯವಾ?​

Rashmika
Published on

ಹೈದರಾಬಾದ್​: ಪೂಜಾ ಹೆಗ್ಡೆ ದಕ್ಷಿಣ ಭಾರತದ ಟಾಪ್​ ನಟಿಯರಲ್ಲಿ ಒಬ್ಬರು. ಈಗಾಗಲೇ ದೊಡ್ಡ ದೊಡ್ಡ ಚಿತ್ರಗಳಲ್ಲಿ ಪೂಜಾ ನಟಿಸಿದ್ದು, ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಟಪುರಂಲೋ​ ಚಿತ್ರದ ಮೂಲಕ ಟಾಪ್​ ಹೀರೋಯಿನ್​ ಪಟ್ಟ ಪಡೆದುಕೊಂಡಿದ್ದಾರೆ. ಆದರೆ, ಪೂಜಾಗೆ ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಪೂಜಾ ಸರಿಸಮನಾಗೇ ರಶ್ಮಿಕಾ ದೊಡ್ಡ ಚಿತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಿದ್ದಾರೆ.

ಮೊದಲೆರಡು ಚಿತ್ರಗಳಲ್ಲಿ ಪೂಜಾ ಯಾವುದೇ ಎಕ್ಸ್​ಪೋಸ್​ ಇಲ್ಲದೆ ಗೌರಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಎರಡು ಚಿತ್ರಗಳು ಯಶಸ್ವಿಯಾಗದಿದ್ದಾಗ ಬಹುಬೇಗನೆ ತನ್ನ ನಿರ್ಧಾರ ಬದಲಿಸಿಕೊಂಡ ಪೂಜಾ, ಅಲ್ಲು ಅರ್ಜುನ್​ ನಟನೆಯ ಡಿಜೆ ಚಿತ್ರದ ಮೂಲದ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಅಲ್ಲಿಂದಾಚೆಗೆ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಂಡ ಪೂಜಾ, ಸೂಪರ್​ ಸ್ಟಾರ್​ಗಳಾದ ಮಹೇಶ್​ ಬಾಬು ಮತ್ತು ಜೂನಿಯರ್​ ಎನ್​ಟಿಆರ್​ನಂತಹ ಬಿಗ್​ ನಟರೊಂದಿಗೆ ತೆರೆಹಂಚಿಕೊಂಡರು. ಆದರೆ, ಇದೀಗ ಪೂಜಾಗೆ ರಶ್ಮಿಕಾ ಕಠಿಣ ಸ್ಪರ್ಧೆ ನೀಡಿದ್ದು, ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತಿಲ್ಲ. ರಶ್ಮಿಕಾರನ್ನು ದೊಡ್ಡ ಚಿತ್ರಗಳು ಹುಡುಕಿಕೊಂಡು ಬರುತ್ತಿದ್ದು, ಏನಾದರೂ ವಿಶ್ರಾಂತಿ ಪಡೆದರೆ ಚಿತ್ರಗಳು ಕೈತಪ್ಪುವ ಭೀತಿ ಪೂಜಾಗೆ ಕಾಡುತ್ತಿದೆ ಎನ್ನಲಾಗಿದೆ.

ಸಿನಿಮಾಗೆ ಬರುವ ಮುಂಚೆ ಪೂಜಾ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು 2010ರ ಮಿಸ್​ ಯೂನಿವರ್ಸ್​ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್​​ ಅಪ್​ ಸಹ ಆಗಿದ್ದರು. ಆ ಬಳಿಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಪೂಜಾ ಮೊದಲಿಗೆ ತಮಿಳಿನ ಮುಗಮೂಡಿ ಚಿತ್ರದಲ್ಲಿ ನಟಿಸಿದರು. ಚಿತ್ರ 2012ರಲ್ಲಿ ತೆರೆಕಂಡಿತು.

ಇನ್ನು ರಶ್ಮಿಕಾ ವಿಚಾರಕ್ಕೆ ಬರುವುದಾದರೆ ನ್ಯಾಷನಲ್​ ಕ್ರಷ್​ ಆಗಿರುವ ಬಹುಬೇಗನೇ ಚಿತ್ರರಂಗದಲ್ಲಿ ಹೆಸರು ಮಾಡಿದರು. ಬಹುತೇಕ ಸ್ಟಾರ್​ ನಟರ ಜತೆ ನಟಿಸಿರುವ ರಶ್ಮಿಕಾ, ದೊಡ್ಡ ದೊಡ್ಡ ಚಿತ್ರಗಳನ್ನು ಬಾಚಿಕೊಳ್ಳುವ ಮೂಲಕ ಪೂಜಾಗೆ ಸ್ಪರ್ಧೆ ನೀಡುತ್ತಿದ್ದಾರೆ.

ಸದ್ಯಕ್ಕೆ ಪೂಜಾ ಅವರು ಪ್ರಭಾಸ್​ ನಟನೆಯ "ರಾಧೆ ಶ್ಯಾಮ್​" ಮತ್ತು ಅಖಿಲ್​ ಅಕ್ಕಿನೇನಿ ನಟನೆಯ "ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​" ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಅಲ್ಲು ಅರ್ಜುನ್ ನಟನೆ ಪುಷ್ಪ ಮತ್ತು ಮತ್ತೆರಡು ತೆಲುಗು ಪ್ರಾಜೆಕ್ಟ್​ಗಳಿಗೆ ಸಹಿ ಹಾಕಿದ್ದಾರೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net