ಹಾಸ್ಯದ ಕಿಡಿ ಹೊತ್ತಿಸಿದ ಪೆಟ್ರೋಮ್ಯಾಕ್ಸ್; ಟ್ರೇಲರ್ ಬಿಡುಗಡೆ

Petromax
Published on

ಬೆಂಗಳೂರು: ‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಮುಗಿಸಿ ಇದೀಗ ಅದರ ಟ್ರೇಲರ್ ಹೊತ್ತು ತಂದಿದ್ದಾರೆ. ಈ ಮೂಲಕ ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ. ಎಂಬ ಸುಳಿವು ನೀಡಿದ್ದಾರೆ. ಎಂದಿನಂತೆ ವಿಜಯ್ ಪ್ರಸಾದ್ ಅವರ ತಿಳಿಹಾಸ್ಯ, ಒಂದಷ್ಟು ಡಬಲ್ ಮೀನಿಂಗ್ ಡೈಲಾಗ್​ಗಳ ಒಗ್ಗರಣೆ, ‘ಪೆಟ್ರೋಮ್ಯಾಕ್ಸ್’ನಲ್ಲಿಯೂ ಮುಂದುವರಿದಿದೆ.

ನಿತ್ಯ ನಮ್ಮ ನಡುವಿನ ಒಂದಷ್ಟು ಪಾತ್ರಗಳನ್ನೇ ನಿರ್ದೇಶಕರು ತೆರೆಮೇಲೆ ತಂದಿದ್ದಾರೆ. ಫುಡ್ ಡೆಲಿವರಿ ಬಾಯ್ ಆಗಿ ಸತೀಶ್ ನೀನಾಸಂ, ವಿಮೆ ಕಂಪನಿ ಏಜೆಂಟ್ ಆಗಿ ಹರಿಪ್ರಿಯಾ ಅವರ ಬಾಯಲ್ಲಿ ಸಲೀಸಾಗಿ ಡಬಲ್ ಮೀನಿಂಗ್ ಸಂಭಾಷಣೆ ನಲಿಯುತ್ತವೆ. ಕಾರುಣ್ಯಾ ರಾಮ್ ಅರುಣ್ ಸಹ ಚಿತ್ರದಲ್ಲಿದ್ದಾರೆ. ಸತೀಶ್ ಪಿಕ್ಚರ್ಸ್, ಸ್ಟುಡಿಯೋ 18, ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿವೆ. ಅನೂಪ್ ಸಿಳೀನ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net