ಜೂನ್​.4ಕ್ಕೆ ಪೆದ್ದಿ ರಿಲೀಸ್; ಈ ಸಿನಿಮಾಗಾಗಿ ಶಿವಣ್ಣ, ರಾಮ್​ ಚರಣ್​, ಜಾಹ್ನವಿ ಕಪೂರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?.. Peddi

Peddi Cast Fees
Peddi Cast Fees
Published on
Peddi Cast Fees: ರಾಮ್​ ಚರಣ್​, ಜಗಪತಿ ಬಾಬು, ಶಿವರಾಜ್​ ಕುಮಾರ್​ ಸೇರಿದಂತೆ ಘಟಾನುಘಟಿ ತಾರೆಯರೇ ಇರುವ ಪೆದ್ದಿ ಸಿನಿಮಾ ಜೂನ್​ 4ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರತಂಡ ಗುರುನಾಯ್ಡು ಆಗಿರುವ ಶಿವಣ್ಣನ ಪಾತ್ರದ ಬಗ್ಗೆ ಪರಿಚಯ ಮಾಡಿಕೊಡುವ ಮೂಲಕ ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿತ್ತು. ಈ ಮೂಲಕ ಮತ್ತೊಂದು ಕಾಡುತ್ತಿರುವ ಕೆಟ್ಟ ಕುತೂಹಲ ಎಂದರೆ ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎನ್ನುವುದು. ಆ ಬಗ್ಗೆ ಮಾಹಿತಿ ಇಲ್ಲಿದೆ

ರಾಮ್​ ಚರಣ್​ ಸಂಬಾವನೆ ಎಷ್ಟು?

ಹೌದು ಬುಚ್ಚಿ ಬಾಬು ನಿರ್ದೇಶನದ ಪೆದ್ದಿ ಸಿನಿಮಾದಲ್ಲಿ ರಾಮ್​​ಚರಣ್​ ಅವರು ಪೆದ್ದಿ ಪೆಹಲ್ವಾನ್ ಪೈಲ್ವಾನನ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಧಾರಿಯಾಗಿ ನಟಿಸಲು ಅವರು 60 ರಿಂದ 70 ಕೋಟಿ ಗಳಿಸಿದ್ದಾರೆ ಎನ್ನುವ ಊಹೆಪೋಹವಿದೆ. ರಾಮ್​ಚರಣ್​​ ಈ ಸಿನಿಮಾ ಮಾತ್ರವಲ್ಲ ರಂಗಸ್ಥಳಂನಲ್ಲಿಯೂ ಗ್ರಾಮೀಣ ಭಾಗದ ಯುವಕನಾಗಿ ನಟಿಸಿ ಪಾತ್ರಕ್ಕೆ ಜೀವ ತುಂಬಿದ್ದರು. ಈ ಸಿನಿಮಾವನ್ನು ಬುಚ್ಚಿ ಬಾಬು ಅವರ ಗುರುಗಳಾ ಸುಕುಮಾರನ್​ ಅವರೇ ನಿರ್ದೇಶಿಸಿದ್ದರು.

ಜಾಹ್ನವಿ ಕಪೂರ್ ಸಂಭಾವನೆ ಎಷ್ಟು?

ಜಾಹ್ನವಿ ಕಪೂರ್​ ಅವರು ಪೆದ್ದಿ ಸಿನಿಮಾದಲ್ಲಿ ಆಚಿಯಮ್ಮ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಜಾಹ್ನವಿ ಕಪೂರ್​ ತಂಗಿ ಖುಷಿ ಕಪೂರ್​ಗೆ ವಿವರಿಸಿದ್ದರು ಎನ್ನಲಾಗಿದೆ. ಈ ಸಿನಿಮಾದಲ್ಲಿ ಜಾಹ್ನವಿ ಅವರಿಗೆ 5 ರಿಂದ ಆರು ಕೋಟಿ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ದೇವರ ಮೂಲಕ ಅವರು ಟಾಲಿವುಡ್​ಗೆ ಕಾಲಿಟ್ಟಿದ್ದರು.

ದಿವ್ಯೆಂದು ಶರ್ಮಾ

ದಿವ್ಯೆಂದು ಶರ್ಮಾ ಅವರು ಪೆದ್ದಿ ಸಿನಿಮಾದಲ್ಲಿ ರಾಮ್​ ಬುಜ್ಜಿ ಪಾತ್ರಧಾರಿಯಾಗಿ ನಟಿಸಲಿದ್ದಾರೆ. ಇದು ಪ್ರಮುಖ ಪಾತ್ರವೂ ಹೌದು. ಇತ್ತೀಚೆಗೆ ರಿಲೀಸ್ ಆಗಿರುವ ಅವರ ಫಸ್ಟ್​ ಲುಕ್​ ನೋಡುಗರ ನಿದ್ದೆಗೆಡಿಸಿತ್ತು. ಈ ಸಿನಿಮಾಗಾಗಿ ಅವರು ಮೂರರಿಂದ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಗುರುನಾಯ್ಡು ಶಿವಣ್ಣಗೆ ಇಷ್ಟೇ ಸಂಭಾವನೆನಾ?

ಗುರುನಾಯ್ಡು ಕುಸ್ತಿ ತರಬೇತುದಾರನಾಡಿ ಖಡಕ್​​ ಆಗಿ ನಟಿಸಿರುವ ಶಿವರಾಜ್​ ಕುಮಾರ್​ ಅವರು ತಮ್ಮ ಪಾತ್ರಕ್ಕಾಗಿ 4ರಿಂದ 5 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆರೋಗ್ಯ ಏರುಪೇರು ಮಧ್ಯೆಯು ಸಂಪೂರ್ಣ ಅವರ ಪಾತ್ರದ ಮೇಲೆ ಹಾಕಿರುವ ಶ್ರಮಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಜಗಪತಿ ಬಾಬುಗೆ ಸಿಕ್ಕಿದ್ದೆಷ್ಟು?

ಪೆದ್ದಿ ಸಿನಿಮಾದಲ್ಲಿ ಜಗಪತಿ ಬಾಬು ಪಾತ್ರ ಅಪ್ಪಲಸೂರಿ ಎಂದು ಇದಕ್ಕಾಗಿ ಅವರು 2 ರಿಂದ 4 ಕೋಟಿ ಪಡೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ರಂಗಸ್ಥಳಂನಲ್ಲಿ ವಿಲನ್​ ಪಾತ್ರ ಮಾಡಿದ್ದರು. ಪೆದ್ದಿಯಲ್ಲಿ ವಿಲನ್​ ಅಥವಾ ಏನು ಅನ್ನೋದನ್ನು ಕಾದು ನೋಡಬೇಕಾಗಿದೆ.

ಬಾಲಿವುಡ್​ ನಟ ಬೊಮನ್​ ಇರಾನಿ ಪಡೆದ ಸಂಭಾವನೆ ಇಷ್ಟು!

ಪೆದ್ದಿ ಸಿನಿಮಾದಲ್ಲಿ ನಟಿಸಿರುವ ಖ್ಯಾತಿ ಬಾಲಿವುಡ್​ ನಟ ಬೊಮನ್​ ಇರಾನಿಯವರು ಯಾವ ಪಾತ್ರದಲ್ಲಿ ಇಲ್ಲಿ ಬಣ್ಣ ಹಚ್ಚಿದ್ದಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಆದರೆ ಇವರು ಸಹ ಸಿನಿಮಾದ ಅವಿಭಾಜ್ಯ ಅಂಗ ಎಂದು ಹೇಳಲಾಗುತ್ತಿದೆ. ಇವರ ಸಂಭಾವನೆ 1 ರಿಂದ 2 ಕೋಟಿ ಇರಬಹುದು ಎಂದು ಊಹಿಸಲಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net