

ತೆಲುಗಿನ ‘ಆರ್ಎಕ್ಸ್ 100’ ಚಿತ್ರದ ಬಳಿಕ ಬಹುಬೇಡಿಕೆ ನಟಿಯಾಗಿ ಗುರುತಿಸಿ ಕೊಂಡಿದ್ದ ಪಾಯಲ್ ರಜಪೂತ್ ಸದ್ಯ ಟಾಲಿವುಡ್, ಕಾಲಿವುಡ್ನ ಸಾಲುಸಾಲು ಚಿತ್ರಗಳಲ್ಲಿ ಬಿಜಿ. ಇತ್ತೀಚೆಗೆ ತೆರೆಕಂಡ ‘ಆರ್ಡಿಎಕ್ಸ್ ಲವ್’ ಚಿತ್ರ ಕೂಡ
ಪಾಯಲ್ಗೆ ಒಳ್ಳೆಯ ಹೆಸರಿನ ಜತೆಗೆ ಒಂದಷ್ಟು ಅವಕಾಶ ಕೂಡ ತಂದುಕೊಟ್ಟಿತ್ತು. ಈ ನಟಿ ಇದೀಗ ಜಯಂತ್ ಪರಾಂಜಿ ನಿರ್ದೇಶನದ ‘ನರೇಂದ್ರ’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದಿದ್ದು, ನವನಟ ನೀಲೇಶ್ಗೆ ಜತೆಯಾಗಲಿದ್ದಾರೆ.
ಆಕ್ಷನ್-ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರದಲ್ಲಿ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಪಾತ್ರದಲ್ಲಿ ಪಾಯಲ್ ಕಾಣಿಸಿಕೊಳ್ಳಲಿದ್ದಾರೆ. ಭಾರತೀಯ ಬಾಕ್ಸರ್ ಪಾಕಿಸ್ತಾನ ಸೈನ್ಯದ ಕೈಗೆ ಸಿಕ್ಕು, ಜೈಲಿನಲ್ಲಿ ಅವರಿಂದ ಏನೆಲ್ಲ ಶಿಕ್ಷೆಗೆ ಒಳಗಾಗುತ್ತಾರೆ? ಅಲ್ಲಿಂದ ಹೇಗೆ ಪರಾರಿ ಆಗುತ್ತಾರೆ ಎಂಬುದು ಚಿತ್ರಕಥೆ. ಭಾರತ-ಪಾಕ್ ಗಡಿಯಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದ್ದು, ಈಗಾಗಲೇ ಶೇ.80 ಚಿತ್ರೀಕರಣ ಮುಗಿದಿದೆ.
ಬ್ರೆಜಿಲ್ ಮಾಡೆಲ್ ಇಜಾಬೆಲ್ಲಾ ಮಾನವ ಹಕ್ಕುಗಳ ಹೋರಾಟಗಾರರಾಗಿ ಹಾಗೂ ಡಬ್ಲು್ಯಡಬ್ಲು್ಯಇ ಖ್ಯಾತಿಯ ಡಿ ಗ್ರೇಟ್ ಖಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಪಾಯಲ್ ಅವರದ್ದು ಚಿತ್ರದಲ್ಲಿ ಮಹತ್ವದ ಪಾತ್ರ. ನಟ ರವಿತೇಜಗೆ ಜತೆಯಾಗಿ ಅಭಿನಯಿಸಿದ್ದ ‘ಡಿಸ್ಕೋ ರಾಜಾ’ ಸಿನಿಮಾ ಜ.24ರಂದು ಬಿಡುಗಡೆ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಸದ್ಯ ವೆಂಕಟೇಶ್ ದಗ್ಗುಬಾಟಿ ಹಾಗೂ ಅಕ್ಕಿನೇನಿ ನಾಗಚೈತನ್ಯ ಅಭಿನಯದ ‘ವೆಂಕಿ ಮಾಮಾ’ ಹಾಗೂ ತಮಿಳಿನ ‘ಏಂಜೆಲ್’ ಚಿತ್ರದ ಶೂಟಿಂಗ್ನಲ್ಲಿ ಪಾಯಲ್ ತೊಡಗಿಸಿಕೊಂಡಿದ್ದಾರೆ. -ಏಜೆನ್ಸೀಸ್