

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಸದ್ಯ "ರೇಮೋ' ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಮನೆಯಲ್ಲಿದ್ದಾರೆ. ಹೀಗಿರುವಾಗಲೇ ಮನೆಯಲ್ಲಿದ್ದುಕೊಂಡೇ ಹೊಸ ಕೆಲಸಕ್ಕೂ ಅವರು ಮುಂದಾಗಿದ್ದಾರೆ. ಆ ಕೆಲಸ ನಿಜಕ್ಕೂ ಒಂಥರಾ ಮಜವಾಗಿದೆ. ಎಣ್ಣೆ ಬೇಕು ಬೇಕು ಅಂತ ಹಠ ಮಾಡ್ತಿರೋರನ್ನು ಹಿಡಿದು ಕೊಡುವ ಕೆಲಸವದು. ಅರೇ ಸರ್ಕಾರ ಏನಾದ್ರೂ ಅವರನ್ನು ಈ ಕೆಲಸಕ್ಕೆ ನೇಮಿಸಿತಾ ಎಂದು ಅಂದುಕೊಳ್ಳಬೇಡಿ. ಇದು ಬರಿ ತಮಾಷೆಗಷ್ಟೇ. ಅಂದರೆ, ಮೊದಲ ಬಾರಿ ಮೀಮ್ ಕ್ರಿಯೇಟ್ ಮಾಡಿರುವ ಪವನ್ ಒಡೆಯರ್, "ರೇಮೋ' ಚಿತ್ರದ ವಕಿರ್ಂಗ್ ಫೋಟೋಕ್ಕೆ "ನೋಡು ನೋಡು ಅವ್ರೆ, ಎಣ್ಣೆ ಬೇಕೇಬೇಕು ಅಂತ ಹಠ ಮಾಡ್ತಿರೋರು' ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.