

ಪವನ್ ಕಲ್ಯಾಣ್ ಥ್ಯಾಂಕ್ಸ್ ಹೇಳಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟ-ನಟಿಯರು ತಮ್ಮ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುವ ಜನರಿಗೆ ಥ್ಯಾಂಕ್ಸ್ ಹೇಳುವುದು ವಾಡಿಕೆ. ಆದರೆ, ಪವನ್ ಕಲ್ಯಾನ್ ಧನ್ಯವಾದಗಳನ್ನು ಸಲ್ಲಿಸಿರುವುದು ನಟರಾದ ರಾಮ್ಚರಣ್ ತೇಜ ಮತ್ತು ಅಲ್ಲು ಅರ್ಜುನ್ಗೆ.
ಧನ್ಯವಾದ ಹೇಳುವಂತದ್ದನ್ನು ಅವರೇನು ಮಾಡಿದರು ಎಂಬ ಪ್ರಶ್ನೆ ಬರುವುದು ಸಹಜ. ಉತ್ತರ ಇಲ್ಲಿದೆ. ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಕುಟುಂಬಗಳಿಗೆ ರಾಮ್ಚರಣ್ ತೇಜ ಮತ್ತು ಅಲ್ಲು ಅರ್ಜುನ್ಗೆ ಥ್ಯಾಂಕ್ಸ್ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.
ಇತ್ತೀಚೆಗೆ ಪವನ್ ಕಲ್ಯಾಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದಕ್ಕೂ ಒಂದು ದಿನ ಮುನ್ನ ಚಿತ್ತೂರಿನ ಮೂವರು ಪವನ್ ಅಭಿಮಾನಿಗಳು, ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುವ ಫ್ಲೆಕ್ಸ್ಗಳನ್ನು ಹಾಕುವ ಸಂದರ್ಭದಲ್ಲಿ ಕರೆಂಟ್ ಹೊಡೆದು ಸತ್ತಿದ್ದರು. ಈ ವಿಷಯ ಕೇಳಿ ಪವನ್ ಕಂಗಾಲಾಗಿದ್ದಷ್ಟೇ ಅಲ್ಲ, ಮೃತರ ಕುಟುಂಬಗಳಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು.
ಬರೀ ಪವನ್ ಕಲ್ಯಾಣ್ ಅಷ್ಟೇ ಅಲ್ಲ, ರಾಮ್ಚರಣ್ ತೇಜ ಮತ್ತು ಅಲ್ಲು ಅರ್ಜುನ್ ಇಬ್ಬರೂ ಮೃತರ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ರಾಮ್ಚರಣ್ ತೇಜ ಮೂವರ ಕುಟುಂಬಗಳಿಗೆ ತಲಾ ಎರಡೂವರೆ ಲಕ್ಷ ರೂಪಾಯಿಗಳನ್ನು ಕೊಟ್ಟರೆ, ಅಲ್ಲು ಅರ್ಜುನ್ ತಲಾ ಎರಡು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: ಸೈಫ್ ಬೇಡ; ರಾಣಾ ಇರಲಿ … ಪ್ರಭಾಸ್ಗೆ ಅಭಿಮಾನಿಗಳ ಮನವಿ
ಈ ನಟರ ಒಳ್ಳೆಯ ಕೆಲಸಗಳನ್ನು ನೋಡಿ ಖುಷಿಯಾಗಿರುವ ಪವನ್ ಕಲ್ಯಾಣ್, ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 'ನಿಮ್ಮ ಈ ಕೆಲಸ ಜನರ ಮನಸ್ಸಿನಲ್ಲಿ ಯಾವತ್ತೂ ಶಾಶ್ವತವಾಗಿ ಉಳಿಯುತ್ತದೆ' ಎಂದು ಹೇಳಿಕೊಂಡಿದ್ದಾರೆ.