ಪವನ್ ಒಡೆಯರ್ ಬಾಲಿವುಡ್ ಚಿತ್ರ ಶುರು..

Pawan Wadeyar
Published on

ಬೆಂಗಳೂರು: ಬಂಗಾಲಿ ನಟ ಪರಂಬ್ರತಾ ಚಟರ್ಜಿ ಅಭಿನಯದಲ್ಲಿ ಪವನ್ ಒಡೆಯರ್, ಹಿಂದಿ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಮತ್ತು ಈ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಎಂಬ ಸುದ್ದಿಯೊಂದು ಕೆಲವು ತಿಂಗಳುಗಳ ಹಿಂದೆಯೇ ಕೇಳಿ ಬಂದಿತ್ತು. ಅದೀಗ ನಿಜವಾಗಿದೆ. ಅಷ್ಟೇ ಅಲ್ಲ, ‘ನೋಟರಿ’ ಹೆಸರಿನ ಈ ಚಿತ್ರದ ಚಿತ್ರೀಕರಣ ವಿಜಯದಶಮಿ ಹಬ್ಬದಂದು ಪ್ರಾರಂಭವಾಗಿದೆ.

ಸುಳ್ಳು ಹೇಳುವುದು ತಪ್ಪು ಎಂಬ ಸಿದ್ಧಾಂತವನ್ನು ನಂಬಿರುವ ನಾಯಕನ ಜೀವನದಲ್ಲಿ ನಡೆಯುವ ಕಥೆ ಈ ಚಿತ್ರದ ಹೂರಣವಂತೆ. ನಾಯಕ ಸುಳ್ಳು ಹೇಳದಿದ್ದರೂ, ಅವನು ಮಾಡುವ ಕೆಲಸ ಅವನಿಂದ ಆಗಾಗ ಸುಳ್ಳು ಹೇಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿರುತ್ತದೆ. ಅಂತಹ ಸಂದರ್ಭಗಳು ಎದುರಾದಾಗ ಆತ ಸುಳ್ಳು ಹೇಳದೇ ಹೇಗೆ ನಿಭಾಯಿಸುತ್ತಾನೆ ಎನ್ನುವುದನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗುತ್ತದಂತೆ.

ಪರಂಬ್ರತಾಗೆ ನಾಯಕಿಯಾಗಿ ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ಹರ್​ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಅಭಿನಯಿಸುತ್ತಿದ್ದಾರೆ. ಮಿಕ್ಕಂತೆ ದಲೀಪ್ ತಾಹಿಲ್, ಮೋಹನ್ ಅಗಾಶೆ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net