ಚಿತ್ರ ಪ್ರಚಾರದಲ್ಲಿ ಪಾಲ್ಗೊಳ್ಳದ ನಟಿ ತ್ರಿಶಾಗೆ ಸಂಭಾವನೆ ಹಿಂದಿರುಗಿಸಿ ಎಂದ ಚಿತ್ರ ನಿರ್ಮಾಪಕ

thresa feb 23 2020
Published on

ಚನ್ನೈ: ಪರಮ ವಿಲ್ಲಾಯಟ್ಟು ಚಿತ್ರದ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿದ್ದರೆ ಕೊಟ್ಟ ಸಂಭಾವನೆ ಹಿಂದಿರುಗಿಸಿ ಎಂದು ದಕ್ಷಿಣ ಭಾರತದ ಹೆಸರಾಂತ ನಟಿ ತ್ರಿಶಾ ಅವರಿಗೆ ನಿರ್ಮಾಪಕ ಟಿ. ಶಿವಾ ಮನವಿ ಮಾಡಿದ್ದಾರೆ.

ಚಿತ್ರದಲ್ಲಿ ನಟಿ ತ್ರಿಶಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಅವರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಬೇಕು ಎಂದು ಪರಮ ವಿಲ್ಲಾಯಟ್ಟು ಚಿತ್ರದ ನಿರ್ಮಾಪಕ ಟಿ. ಶಿವಾ ಹೇಳಿದ್ದಾರೆ.

ಇದುವರೆಗೆ ನಟಿ ತ್ರಿಶಾ ಅವರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಮುಂದೆ ಪ್ರಚಾರದಲ್ಲಿ ಅವರು ಪಾಲ್ಗೊಳ್ಳದಿದ್ದರೆ ಪಡೆದಿರುವ ಸಂಭಾವನೆಯಲ್ಲಿ ಒಂದು ಭಾಗವನ್ನು ಹಿಂದಿರುಗಿಸಬೇಕು ಎಂದು ಹೇಳಿದ್ದಾರೆ.

ನಟಿ ತ್ರಿಶಾ ಪ್ರಚಾರದಲ್ಲಿ ಪಾಲ್ಗೊಳ್ಳದಿದ್ದರೂ ನಾನೇ ಜವಾಬ್ದಾರಿ ವಹಿಸಿಕೊಂಡು ಚಿತ್ರದ ಪ್ರಚಾರ ಮಾಡುತ್ತೇನೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಚಿತ್ರದ ನಿರ್ದೇಶಕ ಹಾಗೂ ನಾಯಕನ ನಡುವೆ ಉಂಟಾದ ಮನಸ್ತಾಪದಿಂದ ಸಮಸ್ಯೆ ಎದುರಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net