ನಟ ಚಿರಂಜೀವಿ ಸರ್ಜಾ ಮೃತರಾಗಿ ಇಂದಿಗೆ ಒಂದು ತಿಂಗಳು. ಜೂನ್ 7ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಒಂದು ತಿಂಗಳ ತಿಥಿ ನಿಮಿತ್ತ ಅವರ ಕುಟುಂಬದವರು ಚಿರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಹಾಗೇ ಚಿರು ಸ್ನೇಹಿತರೂ ಕೂಡ ಒಟ್ಟಾಗಿ ಸೇರಿ ಚಿರುವಿನ ನೆನಪಲ್ಲಿ ದಿನ ಕಳೆದಿದ್ದಾರೆ.
ಚಿರಂಜೀವಿಯವರ ಸ್ನೇಹ ಬಳಗ ತುಂಬ ದೊಡ್ಡದು. ಇವರೆಲ್ಲರೂ ಸೇರಿ ನಟ ಪನ್ನಗಭರಣ ಮನೆಯಲ್ಲಿ ಸೇರಿ ಚಿರು ಫೋಟೋಕ್ಕೆ ಪೂಜೆ ಸಲ್ಲಿಸಿದ್ದಾರೆ.
ಪನ್ನಗಭರಣ ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿಸಿದ್ದಾರೆ. ಅವರ ಮನೆಗೆ ಬಾಗಿಲಿಗೆ ಬೀಗ ಇಲ್ಲ. ಬದಲಿಗೆ ನಂಬರ್ ಲಾಕ್ ಇದೆ. ಆ ಮನೆ ಎಂದರೆ ಚಿರುಗೆ ತುಂಬ ಇಷ್ಟವಾಗಿತ್ತು. ಬರಬೇಕು ಅಂದಾಗಲೆಲ್ಲ ಬರುತ್ತಿದ್ದರು. ಈ ವಿಚಾರವನ್ನು ಚಿರಂಜೀವಿ ಮೃತಪಟ್ಟ ಸಂದರ್ಭದಲ್ಲಿ ಪನ್ನಗಭರಣ ಅವರೇ ತಿಳಿಸಿದ್ದರು. ಇದೀಗ ಪನ್ನಗಭರಣ ಅವರು ತಮ್ಮ ಮನೆಯಲ್ಲಿ ಚಿರುಗಾಗಿ ಪುಟ್ಟ ಮಂಟಪವನ್ನೇ ಕಟ್ಟಿಬಿಟ್ಟಿದ್ದಾರೆ. ಅಲ್ಲಿ ಚಿರುವಿನ ಚೆಂದನೆಯ ಫೋಟೋ ಇಟ್ಟಿದ್ದಾರೆ. ವಿಡಿಯೋವನ್ನು ಕೂಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಚಿರು..ನಿನ್ನ ಅಚ್ಚುಮೆಚ್ಚಿನ ಸ್ಥಳವಾದ ನನ್ನ ಮನೆಗೆ ನಿನಗೆ ಸ್ವಾಗತ ಎಂದು ವಿಡಿಯೋಕ್ಕೆ ಕ್ಯಾಪ್ಷನ್ ಬರೆದಿದ್ದಾರೆ. ಕೈಕಟ್ಟಿ ನಿಂತು, ನಗುತ್ತಿರುವ ಚಿರಂಜೀವಿ ಫೋಟೋವನ್ನು ಇಟ್ಟು, ಅದರ ಸುತ್ತಲೂ ಹಸಿರು, ಬಿಳಿ ಹೂವುಗಳ ಚೆಂದನೆಯ ಮಂಟಪ ಕಟ್ಟಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಈ ಮೂಲಕ ಅಗಲಿದ ಚಿರುವನ್ನು ತನ್ನ ಮನೆಯಲ್ಲಿ ಜೀವಂತವಾಗಿಟ್ಟಿದ್ದಾರೆ ಪನ್ನಗಭರಣ ಅವರು.
ಇಂದು ಬೆಳಗ್ಗೆಯೂ ಕೂಡ ಒಂದಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಚಿರು, ನೀನು ಇಲ್ಲದೆ ಒಂದು ತಿಂಗಳು ಕಳೆದುಹೋಯಿತು. ಮಾತನಾಡಲು ಸಾಧ್ಯವಾಗುತ್ತಿಲ್ಲ..ಕಣ್ಣಲ್ಲಿ ನೀರು ಬರುತ್ತಿದೆ. ಆದರೂ ಅಳಬಾರದು ಎಂದು ನಿರ್ಧರಿಸಿದ್ದೇವೆ. ಖುಷಿಯಾಗಿರುತ್ತೇವೆ. ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಆದರೆ ಚಿರುವನ್ನು ನೆನಪಿಸಿಕೊಂಡು ಅಳುವುದಿಲ್ಲ. ಬದಲಿಗೆ ಅವನ ನೆನಪಲ್ಲಿ ಸಂಭ್ರಮಪಡುತ್ತೇವೆ..ಅವನೇ ಹೇಳಿದಂತೆ ಎಲ್ಲರೂ ಖುಷಿಯಾಗಿರುತ್ತೇವೆ. ಅವನು ನಮ್ಮ ಕುಟುಂಬ...ಅವನಿಗೆ ಸಂಬಂಧಪಟ್ಟ ವಿಷಯಗಳೆಲ್ಲವೂ ನಮ್ಮದೂ ಹೌದು..ಹಾಗೇ..ನಮ್ಮದೆಲ್ಲವೂ ಅವನಿಗೆ ಸೇರಿದ್ದು. ಪ್ರತಿದಿನ, ಪ್ರತಿಕ್ಷಣ ಅವನ ನೆನಪಲ್ಲಿ ಖುಷಿಯಾಗಿರುತ್ತೇವೆ. ಲವ್..ಯೂ ಫಾರೆವರ್ ಮಚ್ಚಾ..ಎಂದು ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ.

ವಿಶೇಷವೆಂದರೆ ಈ ಪುಟ್ಟ ಸಮಾರಂಭದಲ್ಲಿ ಚಿರು ಪತ್ನಿ ಮೇಘನಾ ರಾಜ್ ಕೂಡ ಭಾಗವಹಿಸಿದ್ದರು. ಅವರೂ ನಗುತ್ತಿರುವುದು ಫೋಟೋದಲ್ಲಿ ಕಾಣಿಸುತ್ತದೆ. (ಏಜೆನ್ಸೀಸ್)