'ಪದವಿ ಪೂರ್ವದಲ್ಲಿ' ಸೋನಲ್​ ಅತಿಥಿ

sonal
Published on

ಬೆಂಗಳೂರು: ಪೃಥ್ವಿ ಶಾಮನೂರ್​ ನಾಯಕನಾಗಿ ನಟಿಸುತ್ತಿರುವ "ಪದವಿ ಪೂರ್ವ' ಚಿತ್ರದ ಶೂಟಿಂಗ್​ ಬಹುತೇಕ ಕೊನೇ ಹಂತದಲ್ಲಿದೆ.

ಹೀಗಿರುವಾಗಲೇ ಈ ಬಳಗಕ್ಕೀಗ ನಟಿ ಸೋನಲ್​ ಮೊಂತೆರೋ ಜತೆಯಾಗಿದ್ದಾರೆ. ಈ ಹಿಂದೆಯೇ "ಪದವಿ ಪೂರ್ವ'ದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದ್ದರೂ, ಅದನ್ನು ತಂಡ ಅಧಿಕೃತ ಮಾಡಿರಲಿಲ್ಲ. ಈಗಾಗಲೇ ಅಂಜಲಿ ಅನೀಶ್​ ಮತ್ತು ಯಶಾ ಶಿವಕುಮಾರ್​ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗಾದರೆ ಈ ಚಿತ್ರದಲ್ಲಿ ಸೋನಲ್​ಗೇನು ಕೆಲಸ? ಅದಕ್ಕೂ ಉತ್ತರವಿದೆ.

ಅವರಿಗಿಲ್ಲಿ ಅತಿಥಿ ಪಾತ್ರ. ಯೋಗರಾಜ್​ ಸಿನಿಮಾಸ್​ ಮತ್ತು ರವಿ ಶಾಮನೂರ್​ ಫಿಲಂಸ್​ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ "ಪದವಿ ಪೂರ್ವ' ಚಿತ್ರವನ್ನು ಹರಿಪ್ರಸಾದ್​ ಜಯಣ್ಣ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಾಲ್ಕನೇ ಹಂತದ ಶೂಟಿಂಗ್​ ಮುಗಿಸಿಕೊಂಡಿರುವ ತಂಡ, ಸೆಪ್ಟೆಂಬರ್​ನಲ್ಲಿ ಬೆಂಗಳೂರು ಮತ್ತು ಮಂಗಳೂರು ಭಾಗದಲ್ಲಿ ಐದನೇ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆ. ಸೋನಲ್​ ಸಹ ಭಾಗವಹಿಸಲಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರಕ್ಕೆ ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net