ಕನ್ನಡಿಗ ಅಮಿತ್ ಬಾಡ್ಕರ್​ಗೆ ಆಸ್ಕರ್ ಗರಿ

Oscar
Published on

ಕಾರವಾರ: ಕಾರವಾರ ಮೂಲದ ಅಮಿತ್ ಬಾಡ್ಕರ್ ಕಾರ್ಯನಿರ್ವಹಿಸಿದ ‘ಟಾಯ್ ಸ್ಟೋರಿ-4’ ಎಂಬ ಅನಿಮೇಟೆಡ್ ಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿದೆ.

ಅಮೆರಿಕದ ಲಾಸ್​ಏಂಜಲೀಸ್​ನಲ್ಲಿ ಫೆ.9ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೋಷ್ ಕೊಲೊನಿ ಮತ್ತು ಮಾರ್ಕ್ ನಿಲ್ಸನ್ ನಿರ್ವಣದ ಈ ಚಿತ್ರದಲ್ಲಿ ಅಮಿತ್ ಬಾಡ್ಕರ್ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಕಾರವಾರ ಮೂಲದ ಅಮಿತ್ ತಂದೆ ಗಣಪತಿ ಬಾಡ್ಕರ್ ಉದ್ಯೋಗಕ್ಕಾಗಿ ಮುಂಬೈನಲ್ಲಿ ನೆಲೆಸಿದ್ದರು. ಅಮಿತ್ ಓದಿ ಬೆಳೆದದ್ದು ಮುಂಬೈನಲ್ಲಿ. ಸದ್ಯ ಯುಎಸ್​ಎ ನಲ್ಲಿ ಅನಿಮೇಷನ್ ತಂತ್ರಜ್ಞರಾಗಿದ್ದು, ಹಾಲಿವುಡ್ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮಿತ್ ಕೆಲಸ ಮಾಡಿದ್ದ ‘ಬ್ರೇವ್’ ಚಿತ್ರಕ್ಕೆ 2012ರಲ್ಲಿ ಹಾಗೂ ‘ಇನ್​ಸೈಡ್ ಔಟ್’ಚಿತ್ರಕ್ಕೆ 2015ರಲ್ಲಿ ಆಸ್ಕರ್ ಲಭಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net