

| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಆನ್‌ಲೈನ್ ಮದುವೆ ಆ್ಲೈನ್ ಶೋಭನ
ನಿರ್ದೇಶಕ: ಬಾವಾಜಿ ವೇಂಪಲ್ಲಿ
ನಿರ್ಮಾಣ: ಅಪ್ಸರಾ ಮೂವೀಸ್
ತಾರಾಗಣ: ಜಗಪ್ಪ, ಸುಷ್ಮಿತಾ, ಸೀರುಂಡೆ ರಘು, ರಾಘವಿ ಶಂಕರ್ ಮತ್ತು ಗಜೇಂದ್ರ
ಆತ ಶ್ಯಾಮಸುಂದರ್ (ಜಗಪ್ಪ). ಭಾವ (ಗಜೇಂದ್ರ) 100 ಹುಡುಗಿಯರನ್ನು ತೋರಿಸಿದರೂ, ಅವರಲ್ಲಿ ಮೂರು ಕೂಡ ಮದುವೆಯ ಮಾತುಕತೆ ಮಟ್ಟಿಗೂ ಬಂದಿರುವುದಿಲ್ಲ. ಈಕೆ ಸತ್ಯಭಾಮ (ಸುಷ್ಮಿತಾ), ತಮ್ಮ ಕಾಮೇಶ (ರಘು) ಅಕ್ಕನಿಗೆ ನೂರು ಹುಡುಗರನ್ನು ಕರೆತಂದರೂ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಓಡಿಸಿರುತ್ತಾಳೆ. ಹೀಗೆ ಮದುವೆಯಾಗದೇ ಒಂಟಿಯಾಗಿದ್ದ ಜೋಡಿಯನ್ನು ‘ಆನ್‌ಲೈನ್ ಮದುವೆ ಆಫ್ಲೈನ್ ಶೋಭನ’ ಎಂಬ ಮೊಬೈಲ್ ಆ್ಯಪ್ ಒಂದುಗೂಡಿಸುತ್ತದೆ. ಹಾಗಂತ ಆನ್‌ಲೈನ್‌ನಲ್ಲೇ ಮದುವೆ ಆಗುತ್ತಾರೆ ಅಂತಲ್ಲ. ಬದಲಾಗಿ ಇಬ್ಬರೂ ಒಬ್ಬರನ್ನೊಬ್ಬರು ನೋಡಿ, ಒಪ್ಪಿ, ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ, ಆನ್‌ಲೈನ್ ಆಗಲಿ, ಆ್ಲೈನ್ ಕೂಡ ಶೋಭನ ಆಗುವುದಿಲ್ಲ. ಅದೇಕೆ ಎಂದು ತಿಳಿಯಲು ಸಿನಿಮಾ ನೋಡಬೇಕು.
ಕಿರುತೆರೆ ಕಾಮಿಡಿ ಶೋಗಳಲ್ಲಿ ಮಿಂಚಿರುವ ಪ್ರತಿಭೆಗಳೇ ಇರುವ ಕಾಮಿಡಿ ಪ್ರಧಾನ ಚಿತ್ರವಿದು. ಜಗಪ್ಪ ಮತ್ತು ಸುಷ್ಮಿತಾ ಪ್ರೀತಿಯಲ್ಲಿದ್ದಾಗ ಚಿತ್ರೀಕರಣವಾಗಿ, ನಿಜ ಜೀವನದಲ್ಲಿ ಮದುವೆಯಾದ ಬಳಿಕ ರಿಲೀಸ್ ಆದ ಸಿನಿಮಾ. ಜಗಪ್ಪ, ಸುಷ್ಮಿತಾ, ರಘು, ಗಜೇಂದ್ರ ಮತ್ತು ರಾಘವಿ ಹೀಗೆ ಐದು ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ಕಿರುತೆರೆಯಲ್ಲಿ ಹತ್ತಿಪ್ಪತ್ತು ನಿಮಿಷಗಳ ಸ್ಕಿಟ್‌ಗಳಲ್ಲಿ ನಗಿಸುತ್ತಿದ್ದ ಈ ತಂಡ, ಇದೀಗ 136 ನಿಮಿಷಗಳ ಸುದೀರ್ಘ ಸ್ಕಿಟ್‌ನಲ್ಲಿ ಬಿಗ್‌ಸ್ಕ್ರೀನ್‌ನಲ್ಲಿ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿದೆ. ಕೆಲವೆಡೆ ಯಶಸ್ವಿಯೂ ಆಗಿದೆ. ಉತ್ತಮ ಕಾನ್ಸೆಪ್ಟ್ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಬಾವಾಜಿ ವೇಂಪಲ್ಲಿ, ಅದನ್ನು ಅಷ್ಟೇ ಉತ್ತಮವಾಗಿ ತೆರೆಯ ಮೇಲೆ ತರುವಲ್ಲಿ ಹಿಂದೆ ಬಿದ್ದಿದ್ದಾರೆ. ಜಾಳು ಜಾಳು ಚಿತ್ರಕಥೆ, ಸಾಧಾರಣ ಹಾಡುಗಳ ಜತೆಗೆ ಬೇರೆ ಸಿನಿಮಾಗಳ ಹಿಟ್ ಸಾಂಗ್‌ಗಳ ಫ್ಯೂಷನ್ ಪ್ರೇಕ್ಷಕರನ್ನು ಕನ್ಫ್ಯೂಷನ್ ಮಾಡಿರುವುದೇ ಹೆಚ್ಚು. ಕಿರುತೆರೆ ಕಾಮಿಡಿ ಕಿಲಾಡಿಗಳ ಹಿರಿತೆರೆ ಹಾವಳಿ ನೋಡಲು ಇಚ್ಛಿಸುವವರು, ಕೆಲ ಕಾಲ ನಕ್ಕಿ ಟೆಮ್‌ಪಾಸ್ ಮಾಡಬಯಸುವವರು ‘ಆನ್‌ಲೈನ್ ಮದುವೆ ಆಫ್ಲೈನ್ ಶೋಭನ’ ಒಮ್ಮೆ ನೋಡಬಹುದು.