ಸಂಚಾರಿ ಇಲ್ಲದೆ ಒಂದು ವರ್ಷ; ವಿಜಯನಿಧಿ ತೋಟದಲ್ಲಿ ಪುತ್ಥಳಿ ಸ್ಥಾಪನೆ

Sanchari Vijay
Published on

ಬೆಂಗಳೂರು: ಒಂದು ವರ್ಷವಾಯ್ತು ಸಂಚಾರಿ ವಿಜಯ್ ಇನ್ನಿಲ್ಲವಾಗಿ. ಕಳೆದ ವರ್ಷ ಇದೇ ದಿನ ಸಂಚಾರಿ ವಿಜಯ್, ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು. ಈ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ವಿಜಯ್ ನೆನಪು ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದೆ.

ಅಂದಹಾಗೆ, ವಿಜಯ್ ಅವರ ಮೊದಲನೇ ಪುಣ್ಯತಿಥಿ ಇತ್ತೀಚೆಗೆ ಮುಗಿದಿದೆ. ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿರುವ ವಿಜಯ್ ಅವರ ವಿಜಯನಿಧಿ ತೋಟದಲ್ಲಿ ಅಂತ್ಯಕ್ರಿಯೆಯಾಗಿತ್ತು. ಅಲ್ಲೇ ವಿಜಯ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಆಚರಿಸಲಾಗಿದೆ. ವಿಜಯ್ ಅವರ ಸಹೋದರರಾದ ವಿರೂಪಾಕ್ಷ ಮತ್ತು ಸಿದ್ಧೇಶ್ ವಾರ್ಷಿಕ ಕ್ರಿಯೆಗಳನ್ನು ನೆರವೇರಿಸಿದ್ದಾರೆ. ಅಷ್ಟೇ ಅಲ್ಲ, ವಿಜಯ್ ಅವರ ಪುತ್ಥಳಿಯನ್ನು ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಪ್ರತಿಷ್ಠಾಪಿಸಲಾಗಿದೆ.

ಇನ್ನು, ಕಳೆದ ಒಂದು ವರ್ಷದಲ್ಲಿ ವಿಜಯ್ ಅಭಿನಯದ ‘ಲಂಕೆ’, ‘ಪುಕ್ಸಟ್ಟೆ ಲೈಫು’, ‘ತಲೆದಂಡ’ ಮತ್ತು ‘ಮೇಲೊಬ್ಬ ಮಾಯಾವಿ’ ಚಿತ್ರಗಳು ಬಿಡುಗಡೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net