

ಬೆಂಗಳೂರು: ಈಗಾಗಲೇ ಕನ್ನಡದಲ್ಲಿ ‘ದಕ್ಷ’ ಮತ್ತು ‘ಬಿಂಬ’ ಎಂಬ ಒನ್ಟೇಕ್ ಸಿನಿಮಾಗಳು ಬಂದಿವೆ. ಅಂದರೆ, ಒಂದೇ ಆಕ್ಷನ್ ಮತ್ತು ಕಟ್ನಲ್ಲಿ ಸಂಪೂರ್ಣವಾಗಿ ಸೆರೆಹಿಡಿಯಲಾದ ಚಿತ್ರಗಳವು. ಆದರೆ, ಅವೆರಡೂ ಚಿತ್ರಗಳು ಸೀಮಿತ ಪ್ರದೇಶದಲ್ಲಿ ನಿರ್ವಣವಾದಂತಹ ಚಿತ್ರಗಳಾಗಿದ್ದವು. ಈಗ ರಾಜೇಶ್ ಬಿ ಅಲಿಯಾಸ್ ರಾಬಿ ಎನ್ನುವವರು ‘ರಕ್ತಗುಲಾಬಿ’ ಎಂಬ ಇನ್ನೊಂದು ಒನ್ ಟೇಕ್ ಸಿನಿಮಾ ಮಾಡಿದ್ದು, ಇದರಲ್ಲಿ ಬ್ಯಾಂಕ್ ರಾಬರಿ, ಚೇಸಿಂಗ್, ಬಾಂಬ್ಬ್ಲಾಸ್ಟ್ ಎಲ್ಲವೂ ಇರಲಿದೆಯಂತೆ.
‘ರಕ್ತಗುಲಾಬಿ ಎರಡು ಗಂಟೆ ಎಂಟು ನಿಮಿಷಗಳಲ್ಲಿ ತಯಾರಾದ ಚಿತ್ರ. ‘ರಕ್ತಗುಲಾಬಿ’ ಚಿತ್ರದಲ್ಲಿ ವಿಕ್ರಮಾದಿತ್ಯ ಮತ್ತು ಶಿವಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಜೋತ್ ಸಂಗೀತ ಸಂಯೋಜಿಸಿದರೆ, ರಾವಣನ್ ಎನ್ನುವವರು ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಬ್ಲಾಕ್ಬೆರ್ರಿ 4ಕೆ ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಸದ್ಯ ಸೆನ್ಸಾರ್ ಅಂಗಳದಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.