ಪ್ರೇಕ್ಷಕರೆದುರಿಗೆ ಮತ್ತೆ ರಶ್ಮಿಕಾ; ಫೆ.25ಕ್ಕೆ ‘ಆಡುವಾಳ್ಳು ಮೀಕು ಜೋಹಾರ್ಲು’ ಬಿಡುಗಡೆ

Rashmika
Published on

‘ಪುಷ್ಪ’ ಚಿತ್ರ ಬಿಡುಗಡೆ ಆದಮೇಲೆ ರಶ್ಮಿಕಾ ಮಂದಣ್ಣ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಹೀಗಿರುವಾಗ ಆ ಖ್ಯಾತಿಯನ್ನೇ ಸದುಪಯೋಗಪಡಿಸಿಕೊಳ್ಳಲು ಮುಂದಾಗಿದೆ ‘ಆಡುವಾಳ್ಳು ಮೀಕು ಜೋಹಾರ್ಲು’ ಸಿನಿಮಾ ತಂಡ. ಕಳೆದ ವರ್ಷವೇ ಪ್ರಾರಂಭವಾದ ಈ ಚಿತ್ರ ಇದೀಗ ಸದ್ದಿಲ್ಲದೆ ಮುಗಿದಿದ್ದು, ಫೆ.25ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಮೂಲಕ ಎರಡೇ ತಿಂಗಳ ಅಂತರದಲ್ಲಿ ಪ್ರೇಕ್ಷಕರೆದುರಿಗೆ ಮತ್ತೆ ಪ್ರತ್ಯಕ್ಷರಾಗುತ್ತಿದ್ದಾರೆ ರಶ್ಮಿಕಾ.

ರಶ್ಮಿಕಾ ಈವರೆಗೂ ಗ್ಲಾಮರಸ್, ಡಿ ಗ್ಲಾಮ್ ಸೇರಿ ಹಲವು ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಆದರೆ, ಶರ್ವಾನಂದ ಜತೆಗಿನ ‘ಆಡುವಾಳ್ಳು ಮೀಕು ಜೋಹಾರ್ಲು’ ಚಿತ್ರ, ಮಹಿಳಾ ಪ್ರಧಾನ ಸಿನಿಮಾ ಎಂಬ ಮಾತು ಕೇಳಿಬರುತ್ತಿದೆಯಾದರೂ, ಅದನ್ನು ಪುಷ್ಟೀಕರಿಸುವಂಥ ಪುರಾವೆ ಈ ವರೆಗೂ ಸಿಕ್ಕಿಲ್ಲ. ಚಿತ್ರದ ಟೀಸರ್, ಟ್ರೇಲರ್ ಬಿಡುಗಡೆ ಆದಮೇಲಷ್ಟೇ ಆ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ತಿರುಮಲ ಕಿಶೋರ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗವೇ ಇದೆ. ಸದ್ಯ ಬಾಲಿವುಡ್​ನಲ್ಲಿ ‘ಮಿಷನ್ ಮಜ್ನು’ ಮತ್ತು ‘ಗುಡ್ ಬೈ’ ಸಿನಿಮಾ ಮುಗಿಸಿರುವ ರಶ್ಮಿಕಾ, ಇನ್ನೇನು ಹೊಸ ಸಿನಿಮಾಗಳ ಘೋಷಣೆಯ ಹೊಸ್ತಿಲಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net