

ಹೋಟೆಲ್ನ ಮೂರನೇ ಮಹಡಿಯಿಂದ ಹಾರಿ ಪಾಪ್ ತಾರೆ ಲಿಯಾಮ್ ಪೇಯ್ನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂಗ್ಲೀಷ್ ಬ್ಯಾಂಡ್ "ಒನ್ ಡೈರೆಕ್ಷನ್'ನ ಸದಸ್ಯನಾಗಿದ್ದ ಪೇಯ್ನ್ಗೆ 31 ವರ್ಷ ವಯಸ್ಸಾಗಿತ್ತು. "ಸ್ಟ್ರಿಪ್ ದಟ್ ಡೌನ್', "ಫಾರ್ ಯೂ' ಸೇರಿ ಹಲವು ಸಿಂಗಲ್ಸ್, "ಎಲ್ಪಿ 1' ಆಲ್ಬಂ ಸೇರಿ ಕೆಲ ಹಾಲಿವುಡ್ ಚಿತ್ರಗಳಲ್ಲೂ ಹಾಡಿರುವ ಪೇಯ್ನ್ ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.
ಆದರೆ, ಕೆಲ ವರ್ಷಗಳಿಂದ ಮದ್ಯವ್ಯಸನಿಯಾಗಿದ್ದ ಪೇಯ್ನ್ ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಕಳೆದ ವರ್ಷ "ತಮಗೆ ಆಗಾಗ ಆತ್ಮಹತ್ಯೆಯ ಆಲೋಚನೆ ಬರುತ್ತಿರುತ್ತದೆ' ಎಂದೂ ಹೇಳಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಅರ್ಜೆಂಟೀನಾದ ಬುಯೆನೊಸ್ ಏರಿಸ್ಗೆ ತೆರಳಿದ್ದ ಅವರು, ಕಸಸುರ್ ಹೋಟೆಲ್ನಲ್ಲಿ ತಂಗಿದ್ದರು.
ಬುಧವಾರ (ಅ. 16) ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿಯೊಬ್ಬ ಮದ್ಯ ಮತ್ತು ಡ್ರಗ್ಸ್ ನಶೆಯಲ್ಲಿ ತನ್ನ ರೂಮ್ ಧ್ವಂಸಗೊಳಿಸುತ್ತಿದ್ದು, ತಕ್ಷಣ ಸ್ಥಳಕ್ಕೆ ಧಾವಿಸುವಂತೆ ಹೇಳಿದ್ದಾರೆ. ಆದರೆ, ಪೊಲೀಸರು ಹೋಟೆಲ್ಗೆ ಬರುವಷ್ಟರಲ್ಲಿ ಪೇಯ್ನ್ ಮೂರನೇ ಮಹಡಿಯಲ್ಲಿದ್ದ ತಮ್ಮ ರೂಮಿನ ಬಾಲ್ಕನಿಯಿಂದ ಹಾರಿದ್ದಾರೆ ಎನ್ನಲಾಗಿದೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಮರಣೋತ್ತರ ಪರೀೆ ನಡೆಸಲಾಗುತ್ತಿದೆ. &ಏಜೆನ್ಸೀಸ್